ಭೂಸೇನೆಯಲ್ಲಿ 22 ವರ್ಷ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿ ಹುಟ್ಟೂರಿಗೆ ಆಗಮಿಸಿದ ಎ.ಸಿ.ಪಿ ಹವಾಲ್ದಾ‌ರ್ ದೇವಪ್ರಸಾದ್ ಗೌಡ ರವರಿಗೆ ಸ್ವಾಗತ ಮತ್ತು ಅಭಿನಂದನಾ ಕಾರ್ಯಕ್ರಮ

Picture of Savistara

Savistara

Bureau Report

ಮೊಗ್ರು : ರಾಷ್ಟ್ರ ಭಕ್ತರ ವೇದಿಕೆ ಬಂದಾರು ಮತ್ತು ಮೊಗ್ರು ಗ್ರಾಮ ಇದರ ನೇತೃತ್ವದಲ್ಲಿ ವಿವಿಧ ಸಂಘ ಸಂಸ್ಥೆಗಳು, ನಿವೃತ್ತ ಸೇನಾನಿಗಳ ಸಂಘ ಹಾಗೂ ಊರವರ ಸಹಕಾರದಲ್ಲಿ ಭಾರತ ಮಾತೆಯ ಸೇವೆಯಲ್ಲಿ 22 ವರ್ಷಗಳ ಕಾಲ ಸೇವೆ ಸಲ್ಲಿಸಿ ಕರ್ತವ್ಯದಿಂದ ನಿವೃತ್ತಿ ಹೊಂದಿ ಫೆ 01 ರಂದು ಹುಟ್ಟೂರಿಗೆ ಆಗಮಿಸಿದ ಮೊಗ್ರು ಗ್ರಾಮದ ಮುಗೇರಡ್ಕ ಬರೆಮೇಲು ನಿವಾಸಿ ವೀರ ಯೋಧ ಎ.ಸಿ.ಪಿ ಹವಾಲ್ದಾರ್ ದೇವಪ್ರಸಾದ್ ಗೌಡ ರವರನ್ನು ಹಿಂದೂ ಸಂಗಮ ಆಯೋಜಕರು ಸ್ವಾಗತಿಸಿ, ಸನ್ಮಾನಿಸಿ, ಜಿಲ್ಲೆ, ತಾಲೂಕು ನಿವೃತ ಸೇನಾನಿಗಳ ಸಂಘದ ಪದಾಧಿಕಾರಿಗಳು ಗೌರವ ವಂದನೆ ಸಲ್ಲಿಸಿದರು.

ರಸ್ತೆಯ ಇಕ್ಕೆಲದಲ್ಲಿ ಆಯಾ ಭಾಗದ ನಾಗರಿಕರು, ವಿವಿಧ ಸಂಘ ಸಂಸ್ಥೆಗಳು ಸನ್ಮಾನಿಸಿದರು. ನಂತರ ಮುಗೇರಡ್ಕ ಮೂವರು ದೈವಗಳ ದೈವಸ್ಥಾನ ಬಳಿ ಅಭಿನಂದನಾ ಕಾರ್ಯಕ್ರಮ ನೆರವೇರಿತು. ಮೆರವಣಿಗೆ ಸಾಗುವ ಸಂದರ್ಭದಲ್ಲಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಸನ್ಮಾನಿಸಿ, ಅಭಿನಂದಿಸಿದರು, ಹಾಗೂ ಉದ್ಯಮಿಗಳಾದ ಕಿರಣ್ ಚಂದ್ರ ಸನ್ಮಾನಿಸಿದರು. ಪುತ್ತೂರು ಕ್ಷೇತ್ರ ಮಾಜಿ ಶಾಸಕ ಸಂಜೀವ ಮಠಂದೂರು ಅಭಿನಂದನಾ ಭಾಷಣ ಮಾಡಿ ಸೈನಿಕರ ಸಾಧನೆ, ದೇಶ ಸೇವೆಯ ತ್ಯಾಗ, ಬಲಿದಾನದ ಬಗ್ಗೆ ಮಾತನಾಡಿದರು. ಸೇನಾ ನಿವೃತ್ತಿ ನಂತರ ಸಮಾಜ ಸೇವೆ ಸಂಘ ಸಂಸ್ಥೆಗಳ ಜೊತೆಗೆ ಸಮಾಜಮುಖಿ ಕಾರ್ಯದಲ್ಲಿ ತೊಡಗಿಸುವಂತೆ ತಿಳಿಸಿ ದೇವಪ್ರಸಾದ್ ರವರ ಬಗ್ಗೆ ಗುಣಗಾನ ಮಾಡಿದರು. ಬೆಳ್ತಂಗಡಿ ತಾಲೂಕು ನಿವೃತ್ತ ಸೇನಾನಿಗಳ ಸಂಘದ ಅಧ್ಯಕ್ಷ ತಂಗಚ್ಚನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಸೇನಾನಿ ವಿಕ್ರಂ ಜೆ. ಏನ್ ಸೇನಾ ವೃತ್ತಿ ಬಗ್ಗೆ ತಿಳಿಸಿದರು.

ಅಭಿನಂದನೆ ಸ್ವೀಕರಿಸಿದ ದೇವಪ್ರಸಾದ್ ಗೌಡ ರವರು ತಮ್ಮ ಅನುಭವ ಹಂಚಿಕೊಳ್ಳುವ ಜೊತೆಗೆ ಸೇನೆ, ಕಾರ್ಯಕ್ರಮ ಆಯೋಜಕರಿಗೆ, ಆಗಮಿಸಿದ ದೇಶಭಕ್ತರಿಗೆ ಕೃತಜ್ಞತೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಬಂದಾರು ಪಂಚಾಯತ್ ಅಧ್ಯಕ್ಷ ದಿನೇಶ್‌ ಗೌಡ ಖಂಡಿಗ, ಪದ್ಮುಂಜ ಸಿ ಎ ಬ್ಯಾಂಕ್ ಅಧ್ಯಕ್ಷ ರಕ್ಷಿತ್ ಪಣೆಕ್ಕರ, ಬಂದಾರು ಪಂಚಾಯತ್ ಸದಸ್ಯರಾದ ಗಂಗಾಧರ ಪೂಜಾರಿ, ಮುಗೇರಡ್ಕ ಮೂವರು ದೈವಗಳ ದೈವಸ್ಥಾನ ಆಡಳಿತ ಮೊತ್ತೇಸರರಾದ ಮನೋಹರ ಗೌಡ ಅಂತರ, ಚಂದ್ರಹಾಸ ಗೌಡ ದೇವಸ್ಯಗುತ್ತು, ನಿವೃತ್ತ ಸೇನಾನಿ ಚಂದಪ್ಪ ದಂಬೆತ್ತಿಮಾರು, ಅಶೋಕ್ ಪಿ. ಎಲ್ ಮುಗೇರಡ್ಕ, ಅಭಿನಂದನೆ ಸ್ವೀಕರಿಸಿದ ಸೇನಾನಿ ದೇವಪ್ರಸಾದ ಪತ್ನಿ ಶ್ರೀಮತಿ ಹರಿಣಾಕ್ಷಿ ದೇವಪ್ರಸಾದ್‌, ತಂದೆ ಬಾಬು ಗೌಡ ಮತ್ತು ಶ್ರೀಮತಿ ಮೋನಕ್ಕ, ಸಹೋದರ ಆನಂದ ಗೌಡ ಮತ್ತು ಹೇಮಲತಾ ಮತ್ತು ಮಕ್ಕಳು ಉಪಸ್ಥಿತರಿದ್ದರು.

ರಾಷ್ಟ್ರ ಭಕ್ತರ ವೇದಿಕೆ ಬಂದಾರು ಮತ್ತು ಮೊಗ್ರು ಗ್ರಾಮ,ಗ್ರಾಮ ಪಂಚಾಯತ್ ಬಂದಾರು, ಮೂವರು ದೈವಗಳ ದೈವಸ್ಥಾನ ಮುಗೇರಡ್ಕ,ಕೊರಗಪ್ಪ ಗೌಡ ಮತ್ತು ಮಕ್ಕಳು ಕುಟುಂಬಸ್ಥರು ದಂಡುಗ ಇವರುಗಳಿಂದ ಸನ್ಮಾನ ನೆರವೇರಿತು. ಪಂಚಾಯತ್ ಸದಸ್ಯರಾದ ಬಾಲಕೃಷ್ಣ ಗೌಡ ಮುಗೇರಡ್ಕ ಸ್ವಾಗತಿಸಿ, ಮುಖ್ಯ ಶಿಕ್ಷಕರಾದ ಮಾಧವ ಗೌಡ ದೊರ್ತೋಡಿ ಕಾರ್ಯಕ್ರಮ ನಿರೂಪಿಸಿ, ಧನ್ಯವಾದವಿತ್ತರು. ರಾಷ್ಟ್ರಭಕ್ತರ ವೇದಿಕೆ ಬಂದಾರು ಮತ್ತು ಮೊಗ್ರು ಗ್ರಾಮ ಇದರ ಆಯೋಜಕರಾದ ಬಾಲಕೃಷ್ಣ ಗೌಡ ಮುಗೇರಡ್ಕ, ಗಿರೀಶ್ ಗೌಡ. ಬಿ. ಕೆ. ಮೈರೋಳ್ತಡ್ಕ, ರಂಜಿತ್ ಗೌಡ ನಡುಮಜಲು, ಶಿವರಾಮ್ ಗೌಡ ಕೊಡಿನೆಕ್ಕಿಲು, ರಮೇಶ್ ಗೌಡ ನೆಕ್ಕರಾಜೆ, ವರುಣ್ ಗೌಡ ನೆಕ್ಕರಾಜೆ, ಗಂಗಾಧರ ಪೂಜಾರಿ ದಂಬೆತ್ತಿಮಾರು, ಪುರಂದರ ಗೌಡ ನೈಮಾರು, ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದರು.

News Updates

ಎಸ್‌ಐಆ‌ರ್ ವಿಚಾರದಲ್ಲಿ ಬಿಜೆಪಿ ಕಾರ್ಯಕರ್ತರ ಬೆದರಿಸಿದರೆ ಸುಮ್ಮನಿರಲ್ಲ: ಪೊಲೀಸರಿಗೆ ಸಂಸದ ಕ್ಯಾ. ಚೌಟ ಎಚ್ಚರಿಕೆ – ಕಾಂಗ್ರೆಸ್ ತನ್ನ ಆರೋಪಗಳಿಗೆ ಸೂಕ್ತ ಸಾಕ್ಷ್ಯಾಧಾರಗಳನ್ನು ಒದಗಿಸಲಿ ಅಕ್ರಮವಾಗಿ ಮತ ರದ್ದು -ಮಾಡಲಾದ ವ್ಯಕ್ತಿಯನ್ನು ತಂದು ಚುನಾವಣಾಧಿಕಾರಿ ಮುಂದೆ ನಿಲ್ಲಿಸಲಿ: ಸಂಸದ ಸವಾಲು

News Updates

ಕೇಂದ್ರ ಸರ್ಕಾರದಿಂದ ಶಿವಮೊಗ್ಗ ನಗರ ಬೈಪಾಸ್ ಹಾಗೂ ನಗರ ವ್ಯಾಪ್ತಿಯ ಹೆದ್ದಾರಿ ಅಭಿವೃದ್ಧಿಗೆ 466.74 ಕೋಟಿ ರೂ. ಮಂಜೂರು; ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ ಕೃತಜ್ಞತೆ ಸಲ್ಲಿಸಿದ ಸಂಸದ ಬಿ.ವೈ. ರಾಘವೇಂದ್ರ

[t4b-ticker]
error: Content is protected !!