‘ನೆಲದ ಕಾನೂನು ಪಾಲಿಸದಿದ್ದರೆ ದೇಶವನ್ನು ಬಿಟ್ಟು ತೊಲಗಿರಿ’ | ಮೆಟಾಗೆ ಸುಪ್ರೀಂ ಎಚ್ಚರಿಕೆ | ಬಳಕೆದಾರರ ಗೌಪ್ಯತೆ ಉಲ್ಲಂಘನೆಗೆ ಅವಕಾಶ ಕೊಡಲ್ಲ

Picture of Savistara

Savistara

Bureau Report

ಹೊಸದಿಲ್ಲಿ: ವಾಟ್ಸ್ಆ್ಯಪ್ ಗೌಪ್ಯತೆ ನೀತಿಸಂಬಂಧ ಮಾತೃ ಸಂಸ್ಥೆಮೆಟಾ ವೇದಿಕೆಗೆ ಕಠಿಣ ಎಚ್ಚರಿಕೆ ನೀಡಿರುವ ಸುಪ್ರೀಂ ಕೋರ್ಟ್. ದೇಶದ ನಾಗರಿಕರ ಗೌಪ್ಯತೆ ಹಕ್ಕುಗಳನ್ನು ಉಲ್ಲಂಘಿಸಲು ಅವಕಾಶ ನೀಡುವುದಿಲ್ಲ. ದೇಶದ ಸಂವಿಧಾನದಡಿ ರೂಪಿಸಲಾದ ಕಾನೂನು ಪಾಲಿಸಲು ಸಾಧ್ಯವಾಗದಿದ್ದರೆ ದೇಶ ಬಿಟ್ಟು ತೊಲಗಬಹುದು ಎಂದು ಖಡಕ್ ಸೂಚನೆ ನೀಡಿದೆ.ನಾಗರಿಕರ ಗೌಪ್ಯತಾ ನೀತಿ ಉಲ್ಲಂಘಿ ಸಿದ ಮೆಸೇಜಿಂಗ್ ಆ್ಯಪ್‌ಗೆ ಭಾರತೀಯ ಸ್ಪರ್ಧಾ ಆಯೋಗ ವಿಧಿಸಿದ್ದ 212 ಕೋಟಿ ರೂ.ದಂಡದ ನಿಯಮ ಎತ್ತಿ ಹಿಡಿದ ಕಾನೂನು ಮೇಲ್ಮನವಿ ನ್ಯಾಯಮಂಡಳಿಯ ಆದೇಶ ಪ್ರಶ್ನಿಸಿ ವಾಟ್ಸ್‌ಆ್ಯಪ್ ಸಂಸ್ಥೆ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು.

ವಾಟ್ಸ್ಆ್ಯಪ್ ಪರವಾಗಿ ಮೆಟಾ ಸಲ್ಲಿಸಿದ್ದ ಮೇಲ್ಮನವಿ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್, ನ್ಯಾ.ಜೋಯ್ತಲ್ಯ ಬಾಗ್ನಿ, ನ್ಯಾ.ವಿಪುಲ್ ಪಂಚೋಲಿ ಅವರಿದ್ದ ಪೀಠ, ಬಳಕೆದಾರರ ಗೌಪತ್ಯೆ ಉಲ್ಲಂಘಿಸಲು ಯಾವುದೇ ಸಂಸ್ಥೆಗೆ ಕೊಡುವುದಿಲ್ಲ ಎಂದು ಸ್ಪಷ್ಟಪಡಿಸಿತು.ಗೌಪ್ಯತೆ ಜತೆ ಆಟವಾಡಬೇಡಿ: ‘ಡೇಟಾ ಹಂಚಿಕೆ ಹೆಸರಿನಲ್ಲಿ ದೇಶದ ನಾಗರಿಕರ ಗೌಪ್ಯತೆಯ ಹಕ್ಕಿನೊಂದಿಗೆ ಆಟವಾಡಲು ಬಿಡುವುದಿಲ್ಲ. ಜನರಿಗೆ ಬೇರೆ ಆಯ್ಕೆಯಿಲ್ಲ ಎಂಬ ಕಾರಣಕ್ಕೆ ನೆಲದ ಕಾನೂನು ಹಾಗೂ ಸಂವಿಧಾನವನ್ನು ಅಣಕಿಸುವ ಪ್ರಯತ್ನ ಸರಿಯಾದ ಕ್ರಮವಲ್ಲ. ಮೆಸೇಜಿಂಗ್ ಆ್ಯಪ್‌ನಲ್ಲಿ ಏಕಸ್ವಾಮ್ಯ ಸೃಷ್ಟಿಸಿಕೊಂಡು ಜನರ ಗೌಪ್ಯತೆಯ ಹಕ್ಕಿನೊಂದಿಗೆ ಆಟವಾಡಲು ಸಾಧ್ಯವಿಲ್ಲ,” ಎಂದು ಸಿಜೆಐ ಸೂರ್ಯಕಾಂತ್ ಖಡಕ್ ಸಂದೇಶ ರವಾನಿಸಿದರು.

ಅವರು’ಸ್ನೇಹಿತರು ಮತ್ತು ಕುಟುಂಬದ ನಡುವಿನ ವೈಯಕ್ತಿಕ ಚಾಟ್ ಗಳನ್ನು “ఎండ్ టు ఎండా ఎనాశ్రిప్టో ‘ ಮಾಡಲಾಗಿದೆ. ವಾಟ್ಸ್‌ಆ್ಯಪ್‌ನಲ್ಲಿ ಡೇಟಾವನ್ನು ಹಂಚಿಕೊಳ್ಳಲಾದ ಸಂಗ್ರಹಿಸಿ ಫೇಸ್‌ಬುಕ್ ಜಾಹೀರಾತು ಗಳೂ ಸೇರಿದಂತೆ ಕೆಲವು ವ್ಯವಹಾರಿಕ ಉದ್ದೇಶಕ್ಕೆ ಬಳಸಲಾಗುತ್ತಿದೆ,” ಎಂದು ಮೆಟಾ ಪರ ವಕೀಲರು ವಾದಿಸಿದರು.

[t4b-ticker]
error: Content is protected !!