ದಕ್ಷಿಣ ಕನ್ನಡ ಜಿಲ್ಲೆಯ ಆಸಕ್ತ ರೈತರಿಗೆ ಪಶುಪಾಲನಾ ಇಲಾಖೆಯ ಪಶುಪಾಲನಾ ಮತ್ತು ಪಶುವೈದ್ಯಕೀಯ ತರಬೇತಿ ಕೇಂದ್ರ, ಮಂಗಳೂರು ವತಿಯಿಂದ ಫೆಬ್ರವರಿ ತಿಂಗಳಲ್ಲಿ ಪಶುಪಾಲನಾ ಚಟುವಟಿಕೆಗಳ ಕುರಿತಂತೆ ತರಬೇತಿ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ. ರೈತರಿಗೆ ವಿಶೇಷವಾಗಿ ಕೋಳಿ ಸಾಕಾಣಿಕೆ ತರಬೇತಿ ಕಾರ್ಯಕ್ರಮವನ್ನು ಫೆಬ್ರವರಿ 20 ರಿಂದ 21 ರವರೆಗೆ ನಡೆಸಲಾಗುತ್ತಿದೆ. ತರಬೇತಿಯಲ್ಲಿ ಭಾಗವಹಿಸಲು ಆಸಕ್ತ ರೈತರು ತಮ್ಮ ತಮ್ಮ ತಾಲೂಕಿನ ಪಶುಪಾಲನಾ ಅಧಿಕಾರಿಗಳನ್ನು ಸಂಪರ್ಕಿಸಿ ನೋಂದಣಿ ಮಾಡಿಕೊಳ್ಳಬಹುದಾಗಿದೆ ಎಂದು ఇలాఖి ಮುಖ್ಯ ಪಶುವೈದ್ಯಾಧಿಕಾರಿ(ಆಡಳಿತ) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನೋಂದಣಿ ಸಂಪರ್ಕ ಸಂಖ್ಯೆ
ಮಂಗಳೂರು ತಾಲೂಕು – 9243306956 / 0824-2950369
ಉಳ್ಳಾಲ ತಾಲೂಕು – 9880424077
ಮುಲ್ಕಿ ತಾಲೂಕು – 8971024282
ಮೂಡಬಿದ್ರೆ ತಾಲೂಕು – 7204271943
ಬಂಟ್ವಾಳ ತಾಲೂಕು – 94482530103
ಬೆಳ್ತಂಗಡಿ ತಾಲೂಕು – 9481963820
ಪುತ್ತೂರು ತಾಲೂಕು – 9483920208
ಕಡಬ ತಾಲೂಕು – 9483922594
ಸುಳ್ಯ ತಾಲೂಕು – 9844995078









































