ಮೆಟ್ರೋ ರೇಟ್ ಹೆಚ್ಚಳಕ್ಕೆ ಅಸ್ತು ಎಂದ ಸರ್ಕಾರ, ಈ ತಿಂಗಳಿಂದಲೇ ರೇಟ್ ಜಾಸ್ತಿ

Picture of Savistara

Savistara

Bureau Report

ಬೆಂಗಳೂರಿನ ಬಹುತೇಕ ಮಂದಿ ನಮ್ಮ ಮೆಟ್ರೋ ಮೇಲೆ ಡಿಪೆಂಡ್ ಆಗಿದ್ದಾರೆ. ಕಷ್ಟಪಟ್ಟು ನಿಂತುಕೊಂಡು ಹೋದರೂ ಪರವಾಗಿಲ್ಲ ಸಿಟಿ ಬಸ್ ಹತ್ತೋದಿಲ್ಲ. ಇದೀಗ ಮೆಟ್ರೋ ದರದ ಬಗ್ಗೆ ಹೊಸ ಅಷ್ಟೇಟ್ ಸಿಕ್ಕಿದೆ.ನಮ್ಮ ಮೆಟ್ರೋ ಬೋರ್ಡ್ ಮೀಟಿಂಗ್‌ನಲ್ಲಿ ಪ್ರಯಾಣ ದರವನ್ನು ಶೇ.5ರಷ್ಟು ಏರಿಕೆ ಮಾಡುವುದೆಂದು ನಿರ್ಧಾರ ಮಾಡಲಾಯಿತು. ಈ ಪ್ರಸ್ತಾವನೆಯನ್ನು ಸರ್ಕಾರದ ಮುಂದಿಟ್ಟಿದ್ದು, ಸರ್ಕಾರ ಕೂಡ ಒಪ್ಪಿಗೆ ನೀಡಿದೆ.

ಇದೇ ತಿಂಗಳ ಒಂಬತ್ತನೇ ತಾರಿಖಿನಿಂದ ಮೆಟ್ರೋ ದರ ಏರಿಕೆಯಾಗಲಿದೆ. ಇನ್ನೇನು ಸ್ವಲ್ಪ ಹೊತ್ತಿನಲ್ಲೇ ಬಿಎಂಆರ್‌ಸಿಎಲ್ ಈ ಬಗ್ಗೆ ಅಧಿಕೃತ ಘೋಷಣೆ ಹೊರಡಿಸಲಿದೆ.ಕಳೆದ ವರ್ಷ ಫೆಬ್ರವರಿಯಲ್ಲಿ ಮೆಟ್ರೋ ಟಿಕೆಟ್ ದರವನ್ನು ಶೇ.101.5ರಷ್ಟು ದರ ಹೆಚ್ಚಳ ಮಾಡಲಾಗಿತ್ತು. ಬಳಿಕ ಇದಕ್ಕೆ ತೀವ್ರ ವಿರೋಧಗಳು ವ್ಯಕ್ತವಾಗುತ್ತಿದ್ದಂತೆಯೇ ಎಚ್ಚೆತ್ತುಕೊಂಡ ಬಿಎಂಆರ್‌ಸಿಎಲ್, ಶೇಕಡಾ 71.5ಕ್ಕೆ ದರ ಇಳಿಕೆ ಮಾಡಿತ್ತು. ಆದರೂ ಭಾರತದಲ್ಲೇ ಅತ್ಯಂತ ದುಬಾರಿ ಮೆಟ್ರೋ ನಮ್ಮಬೆಂಗಳೂರಿನ ಮೆಟ್ರೋ ಅನ್ನೋದು ಮರೆಯುವಂತಿಲ್ಲ!

News Updates

ಎಸ್‌ಐಆ‌ರ್ ವಿಚಾರದಲ್ಲಿ ಬಿಜೆಪಿ ಕಾರ್ಯಕರ್ತರ ಬೆದರಿಸಿದರೆ ಸುಮ್ಮನಿರಲ್ಲ: ಪೊಲೀಸರಿಗೆ ಸಂಸದ ಕ್ಯಾ. ಚೌಟ ಎಚ್ಚರಿಕೆ – ಕಾಂಗ್ರೆಸ್ ತನ್ನ ಆರೋಪಗಳಿಗೆ ಸೂಕ್ತ ಸಾಕ್ಷ್ಯಾಧಾರಗಳನ್ನು ಒದಗಿಸಲಿ ಅಕ್ರಮವಾಗಿ ಮತ ರದ್ದು -ಮಾಡಲಾದ ವ್ಯಕ್ತಿಯನ್ನು ತಂದು ಚುನಾವಣಾಧಿಕಾರಿ ಮುಂದೆ ನಿಲ್ಲಿಸಲಿ: ಸಂಸದ ಸವಾಲು

News Updates

ಕೇಂದ್ರ ಸರ್ಕಾರದಿಂದ ಶಿವಮೊಗ್ಗ ನಗರ ಬೈಪಾಸ್ ಹಾಗೂ ನಗರ ವ್ಯಾಪ್ತಿಯ ಹೆದ್ದಾರಿ ಅಭಿವೃದ್ಧಿಗೆ 466.74 ಕೋಟಿ ರೂ. ಮಂಜೂರು; ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ ಕೃತಜ್ಞತೆ ಸಲ್ಲಿಸಿದ ಸಂಸದ ಬಿ.ವೈ. ರಾಘವೇಂದ್ರ

[t4b-ticker]
error: Content is protected !!