ಕೇಂದ್ರಕ್ಕೆ ದಾಖಲೆ 2.87 ಲಕ್ಷ ಕೋಟಿ ರೂ. ಆರ್‌ಬಿಐ ಲಾಭಾಂಶ

Picture of Savistara

Savistara

Bureau Report

ಮುಂಬೈ : ಪಶ್ಚಿಮ ಏಷ್ಯಾ ಸಂಘರ್ಷದಿಂದಾಗಿ ಹೆಚ್ಚುತ್ತಿರುವ ಆಮದು ವೆಚ್ಚ ಮತ್ತು ರಫ್ತುಗಳ ಅಡೆತಡೆಗಳ ನಡುವೆ, ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) 2025-26ರ ಅರ್ಥಿಕ ವರ್ಷ ಕೊನೆಗೆ 2.87 ಲಕ್ಷ ಕೋಟಿ ರೂ. ದಾಖಲೆಯ ಲಾಭಾಂಶವನ್ನು ಶುಕ್ರವಾರ ಘೋಷಿಸಿದ್ದು, ಕೇಂದ್ರ ಸರ್ಕಾರಕ್ಕೆ ಹಸ್ತಾಂತರಿಸಲಿದೆ.

ಇದು ದೇಶದ ಬೊಕ್ಕಸಕ್ಕೆ ಭಾರಿ ಆರ್ಥಿಕ ಉತ್ತೇಜನ ನೀಡಲಿದೆ.ಈ ಲಾಭಾಂಶವು 2024-25ರ ಹಣಕಾಸು ವರ್ಷದ 2.69 ಲಕ್ಷ ಕೋಟಿ ರೂ, ಇದ್ದು, ಇದಕ್ಕೆ ಹೋಲಿಸಿದೆ 2025-26ನೇ ಸಾಲಿನಲ್ಲಿ ಶೇ. 6.7 ರಷ್ಟು ಹೆಚ್ಚಾಗಿದೆ.ಆರ್‌ಬಿಐ ಬಿಡುಗಡೆ ಮಾಡಿರುವ ಪ್ರಕಟಣೆಯ ಪ್ರಕಾರ, ರಿಸ್ಕ್ ಪ್ರಾವಿಷನ್ (ಅಪಾಯದ ಮುನ್ನೆಚ್ಚರಿಕೆ ನಿಧಿ) ಮತ್ತು ಶಾಸನಬದ್ಧ ನಿಧಿಗಳಿಗೆ ವರ್ಗಾಯಿಸುವ ಮುನ್ನ ಬ್ಯಾಂಕಿನ ನಿವ್ವಳ ಆದಾಯವು 2025-26ರ ಆರ್ಥಿಕ ವರ್ಷದಲ್ಲಿ 3.13 ಲಕ್ಷ ಕೋಟಿ ರೂ. ಇತ್ತು. ಇದು ಪ್ರಸ್ತುತ ಆರ್ಥಿಕ ವರ್ಷಕ್ಕೆ 3.96 ಲಕ್ಷ ಕೋಟಿ ರೂ.ಗೆ ತಲುಪಿದೆ.ಅನಿರೀಕ್ಷಿತವಾಗಿ ಎದುರಾಗುವ ಅಪಾಯ ಹಾಗೂ ನಷ್ಟವನ್ನು ಸರಿದೂಗಿಸಲು ಆರ್‌ಬಿಐ 1.09 ಲಕ್ಷ ಕೋಟಿ ರೂ. ಅನ್ನು ಈ ವರ್ಷ ಎತ್ತಿಟ್ಟಿದೆ. ಕಳೆದ ವರ್ಷ ಈ ಇದು44,861 ಕೋಟಿ ರೂ.ಗಳಷ್ಟಿತ್ತು.

News Updates

ಎಸ್‌ಐಆ‌ರ್ ವಿಚಾರದಲ್ಲಿ ಬಿಜೆಪಿ ಕಾರ್ಯಕರ್ತರ ಬೆದರಿಸಿದರೆ ಸುಮ್ಮನಿರಲ್ಲ: ಪೊಲೀಸರಿಗೆ ಸಂಸದ ಕ್ಯಾ. ಚೌಟ ಎಚ್ಚರಿಕೆ – ಕಾಂಗ್ರೆಸ್ ತನ್ನ ಆರೋಪಗಳಿಗೆ ಸೂಕ್ತ ಸಾಕ್ಷ್ಯಾಧಾರಗಳನ್ನು ಒದಗಿಸಲಿ ಅಕ್ರಮವಾಗಿ ಮತ ರದ್ದು -ಮಾಡಲಾದ ವ್ಯಕ್ತಿಯನ್ನು ತಂದು ಚುನಾವಣಾಧಿಕಾರಿ ಮುಂದೆ ನಿಲ್ಲಿಸಲಿ: ಸಂಸದ ಸವಾಲು

News Updates

ಕೇಂದ್ರ ಸರ್ಕಾರದಿಂದ ಶಿವಮೊಗ್ಗ ನಗರ ಬೈಪಾಸ್ ಹಾಗೂ ನಗರ ವ್ಯಾಪ್ತಿಯ ಹೆದ್ದಾರಿ ಅಭಿವೃದ್ಧಿಗೆ 466.74 ಕೋಟಿ ರೂ. ಮಂಜೂರು; ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ ಕೃತಜ್ಞತೆ ಸಲ್ಲಿಸಿದ ಸಂಸದ ಬಿ.ವೈ. ರಾಘವೇಂದ್ರ

[t4b-ticker]
error: Content is protected !!