ಡಿಜಿಲಾಕ‌ರ್ ಹೆಸರಲ್ಲಿ ನಕಲಿ ವೆಬ್‌ಸೈಟ್‌: ಕೇಂದ್ರ ಸರ್ಕಾರದಿಂದ ಎಚ್ಚರಿಕೆಯ ಸಂದೇಶ

Picture of Savistara

Savistara

Bureau Report

ಡಿಜಿಲಾಕರ್‌ ಹೆಸರಿನಲ್ಲಿ ನಕಲಿ ವೆಬ್‌ಸೈಟ್‌ವೊಂದು ಸಕ್ರಿಯವಾಗಿದೆ. ಈ ಬಗ್ಗೆ ಬಳಕೆದಾರರು ಎಚ್ಚರದಿಂದ ಇರಬೇಕು ಎಂದು ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ತಿಳಿಸಿದೆ.ಈ ಸಂಬಂಧ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್‌ ಹಂಚಿಕೊಂಡಿರುವ ಇಲಾಖೆ, ನಕಲಿ ವೆಬ್‌ಸೈಟ್‌ನ ಲಿಂಕ್‌ ಹಂಚಿಕೊಂಡು, ‘ಸೈಬರ್ ಅಪರಾಧಗಳ ವಿಚಾರದಲ್ಲಿ ಎಚ್ಚರ ಹಾಗೂ ಸುರಕ್ಷಿತವಾಗಿರಿ’ ಎಂದು ಸಲಹೆ ನೀಡಿದೆ.

‘ಬಳಕೆದಾರರನ್ನು ದಾರಿತಪ್ಪಿಸಲು, ಕೌನ್ಸಿಲ್ ಫಾರ್ ದಿ ಇಂಡಿಯನ್ ಸ್ಕೂಲ್ ಸರ್ಟಿಫಿಕೇಟ್ ಎಕ್ಸಾಮಿನೇಷನ್ (ಸಿಐಎಸ್‌ಸಿಇ) ಮತ್ತು ಡಿಜಿಲಾಕರ್ ಸೇವೆಗಳನ್ನು ಒದಗಿಸುವುದಾಗಿ http://digilocker.cisceboard.org ಎಂಬ ನಕಲಿ ವೆಬ್‌ಸೈಟ್‌ ತೆರೆಯಲಾಗಿದೆ. ಯಾವುದೇ ಕಾರಣಕ್ಕೂ ವೈಯಕ್ತಿಕ ಮಾಹಿತಿ, ಆಧಾರ್‌, ಒಟಿಪಿ ಅಥವಾ ಪಾವತಿ ವಿವರಗಳನ್ನು ಹಂಚಿಕೊಳ್ಳಬೇಡಿ’ ಎಂದು ಸೂಚಿಸಿದೆ.https://digilocker.gov.in/ ಇದು ಡಿಜಿಲಾಕರ್‌ ವೆಬ್‌ಸೈಟ್‌ನ ನಿಜವಾದ ವಿಳಾಸ. ಆಧಾರ್‌ ಕಾರ್ಡ್ ಸಂಖ್ಯೆ ಹೊಂದಿರುವ ಯಾರು ಬೇಕಾದರೂ ಇದರಲ್ಲಿ ಖಾತೆ ತೆರೆಯಬಹುದು.ವೈಯಕ್ತಿಕ ದಾಖಲೆ, ಸರ್ಟಿಫಿಕೇಟ್‌ಗಳನ್ನು ಡಿಜಿಟಲ್ ರೂಪದಲ್ಲಿ ಸುರಕ್ಷಿತವಾಗಿಟ್ಟುಕೊಳ್ಳಲು ಡಿಜಿಲಾಕರ್‌ ಹೆಚ್ಚು ಸಹಕಾರಿ.

News Updates

ಎಸ್‌ಐಆ‌ರ್ ವಿಚಾರದಲ್ಲಿ ಬಿಜೆಪಿ ಕಾರ್ಯಕರ್ತರ ಬೆದರಿಸಿದರೆ ಸುಮ್ಮನಿರಲ್ಲ: ಪೊಲೀಸರಿಗೆ ಸಂಸದ ಕ್ಯಾ. ಚೌಟ ಎಚ್ಚರಿಕೆ – ಕಾಂಗ್ರೆಸ್ ತನ್ನ ಆರೋಪಗಳಿಗೆ ಸೂಕ್ತ ಸಾಕ್ಷ್ಯಾಧಾರಗಳನ್ನು ಒದಗಿಸಲಿ ಅಕ್ರಮವಾಗಿ ಮತ ರದ್ದು -ಮಾಡಲಾದ ವ್ಯಕ್ತಿಯನ್ನು ತಂದು ಚುನಾವಣಾಧಿಕಾರಿ ಮುಂದೆ ನಿಲ್ಲಿಸಲಿ: ಸಂಸದ ಸವಾಲು

News Updates

ಕೇಂದ್ರ ಸರ್ಕಾರದಿಂದ ಶಿವಮೊಗ್ಗ ನಗರ ಬೈಪಾಸ್ ಹಾಗೂ ನಗರ ವ್ಯಾಪ್ತಿಯ ಹೆದ್ದಾರಿ ಅಭಿವೃದ್ಧಿಗೆ 466.74 ಕೋಟಿ ರೂ. ಮಂಜೂರು; ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ ಕೃತಜ್ಞತೆ ಸಲ್ಲಿಸಿದ ಸಂಸದ ಬಿ.ವೈ. ರಾಘವೇಂದ್ರ

[t4b-ticker]
error: Content is protected !!