ಶೇ 50 ತೆರಿಗೆ ವಿಧಿಸಿದ್ದು ಭಾರತವನ್ನು ಗುರಿಯಾಗಿಸಿಕೊಂಡಲ್ಲ: ಮಾರ್ಕೊ ರುಬಿಯೊ

Picture of Savistara

Savistara

Bureau Report

ನವದೆಹಲಿ: ಭಾರತದೊಂದಿಗೆ ಕಾರ್ಯತಂತ್ರದ ಪಾಲುದಾರಿಕೆ ಹೊಂದಲು ಟ್ರಂಪ್ ಆಡಳಿತ ಬದ್ಧವಾಗಿದೆ ಎಂದು ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ ಹೇಳಿದ್ದಾರೆ. ಆ ಮೂಲಕ ಕಳೆದ ವರ್ಷ ಭಾರತ ಹಾಗೂ ಅಮೆರಿಕದಲ್ಲಿ ನೆಲಸುತ್ತಿರುವ ಭಾರತೀಯರ ಮೇಲೆ ತೆಗೆದುಕೊಂಡ ಕಠಿಣ ನಿರ್ಧಾರದಿಂದ ಸೃಷ್ಟಿಯಾಗಿದ್ದ ಕಂದಕವನ್ನು ಸರಿ ಮಾಡುವ ಯತ್ನ ಮಾಡಿದ್ದಾರೆ.

‘ಭಾರತ ಹಾಗೂ ಅಮೆರಿಕದ ಸಂಬಂಧಕ್ಕೆ ಯಾವುದೇ ಹಿನ್ನಡೆ ಉಂಟಾಗಿಲ್ಲ. ಗಟ್ಟಿ ಸಂಬಂಧ ಮುಂದುವರಿಯುತ್ತಿದೆ’ ಎಂದು ಅವರು ಇಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.ನಾಲ್ಕು ದಿನಗಳ ಭಾರತ ಪ್ರವಾಸಕ್ಕೆ ಬಂದಿರುವ ಅವರು, ಪ್ರಧಾನಿ ಮೋದಿ, ವಿದೇಶಾಂಗ ಸಚಿವ ಜೈ ಶಂಕರ್ ಸೇರಿ ಹಲವು ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ್ದಾರೆ. ಭಾರತದೊಂದಿಗೆ ವ್ಯಾಪಾರ, ಹೂಡಿಕೆ ಹಾಗೂ ಸುಧಾರಿತ ತಂತ್ರಜ್ಞಾನ ಸಂಬಂಧ ಕೆಲಸ ಮಾಡುವುದನ್ನು ಅಮೆರಿಕ ಮುಂದುವರಿಸಲಿದೆ ಎಂದು ಹೇಳಿದ್ದಾರೆ.

ಶೇ 50ರಷ್ಟು ತೆರಿಗೆ ವಿಧಿಸುವ ನಿರ್ಧಾರವು ಭಾರತವನ್ನು ಗುರಿಯಾಗಿ ತೆಗೆದುಕೊಂಡಿದ್ದಲ್ಲ, ಆದರೆ ಜಾಗತಿಕವಾಗಿ ವ್ಯಾಪಾರ ಸಮತೋಲನ ಕಾಪಾಡಿಕೊಳ್ಳಲು ಆ ನಿರ್ಧಾರ ತೆಗೆದುಕೊಳ್ಳಲಾಗಿತ್ತು ಎಂದು ಹೇಳಿದ್ದಾರೆ.ಭಾರತ ಹಾಗೂ ಅಮೆರಿಕ ನಡುವಿನ ವಾಣಿಜ್ಯ ಪಾಲುದಾರಿಕೆಯು ಎರಡು ದೇಶಗಳ ನಡುವಿನ ಸಂಬಂಧದ ತಳಹದಿ ಎಂದು ಅವರು ಹೇಳಿದ್ದಾರೆ.

(ದಿ ನ್ಯೂಯಾರ್ಕ್ ಟೈಮ್ಸ್ ವರದಿ)

News Updates

ಎಸ್‌ಐಆ‌ರ್ ವಿಚಾರದಲ್ಲಿ ಬಿಜೆಪಿ ಕಾರ್ಯಕರ್ತರ ಬೆದರಿಸಿದರೆ ಸುಮ್ಮನಿರಲ್ಲ: ಪೊಲೀಸರಿಗೆ ಸಂಸದ ಕ್ಯಾ. ಚೌಟ ಎಚ್ಚರಿಕೆ – ಕಾಂಗ್ರೆಸ್ ತನ್ನ ಆರೋಪಗಳಿಗೆ ಸೂಕ್ತ ಸಾಕ್ಷ್ಯಾಧಾರಗಳನ್ನು ಒದಗಿಸಲಿ ಅಕ್ರಮವಾಗಿ ಮತ ರದ್ದು -ಮಾಡಲಾದ ವ್ಯಕ್ತಿಯನ್ನು ತಂದು ಚುನಾವಣಾಧಿಕಾರಿ ಮುಂದೆ ನಿಲ್ಲಿಸಲಿ: ಸಂಸದ ಸವಾಲು

News Updates

ಕೇಂದ್ರ ಸರ್ಕಾರದಿಂದ ಶಿವಮೊಗ್ಗ ನಗರ ಬೈಪಾಸ್ ಹಾಗೂ ನಗರ ವ್ಯಾಪ್ತಿಯ ಹೆದ್ದಾರಿ ಅಭಿವೃದ್ಧಿಗೆ 466.74 ಕೋಟಿ ರೂ. ಮಂಜೂರು; ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ ಕೃತಜ್ಞತೆ ಸಲ್ಲಿಸಿದ ಸಂಸದ ಬಿ.ವೈ. ರಾಘವೇಂದ್ರ

[t4b-ticker]
error: Content is protected !!