ಬೆಂಗಳೂರು: ರಾಜ್ಯದಲ್ಲಿ ದ್ವಿಚಕ್ರ ವಾಹನ ಸವಾರರ ಸುರಕ್ಷತೆಯ ದೃಷ್ಟಿಯಿಂದ ಸಾರಿಗೆ ಇಲಾಖೆಯು ‘ಹಾಫ್ ಹೆಲ್ಮೆಟ್’ (Half Helmet) ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಿ ಆದೇಶ ಹೊರಡಿಸಿದೆ.
ಇಲಾಖೆಯ ಕಟ್ಟುನಿಟ್ಟಿನ ನಿಯಮಗಳು:
ISI / BIS ಕಡ್ಡಾಯ: ದ್ವಿಚಕ್ರ ವಾಹನ ಚಾಲಕರು ಹಾಗೂ ಹಿಂಬದಿ ಸವಾರರು ಬಿಐಎಸ್ (BIS) ಅಥವಾ ಐಎಸ್‌ಐ (ISI – IS 4151:2015) ಗುಣಮಟ್ಟದ ಪ್ರಮಾಣೀಕೃತ ಹೆಲ್ಮೆಟ್‌ಗಳನ್ನು ಮಾತ್ರ ಬಳಸಬೇಕಾಗುತ್ತದೆ.
ದಂಡ ಹಾಗೂ ಡಿಎಲ್ ಅಮಾನತು: ನಿಯಮ ಉಲ್ಲಂಘಿಸಿ ಸುರಕ್ಷಿತವಲ್ಲದ ಹಾಫ್ ಹೆಲ್ಮೆಟ್ ಧರಿಸಿದರೆ ₹500 ದಂಡ ವಿಧಿಸಲಾಗುವುದು. ಮರುಕಳಿಸುವ ಉಲ್ಲಂಘನೆಗಳಿಗೆ ಚಾಲನಾ ಪರವಾನಗಿಯನ್ನು (DL) 3 ತಿಂಗಳವರೆಗೆ ಅಮಾನತುಗೊಳಿಸಲು ಮೋಟಾರು ವಾಹನ ಕಾಯ್ದೆಯಡಿ ಅವಕಾಶವಿದೆ.
ತಯಾರಕರು ಹಾಗೂ ಮಾರಾಟಗಾರರ ಮೇಲೂ ಚಾಟಿ: ಗುಣಮಟ್ಟವಿಲ್ಲದ ಹಾಫ್ ಹೆಲ್ಮೆಟ್‌ಗಳನ್ನು ತಯಾರಿಸುವ ಘಟಕಗಳು ಹಾಗೂ ಮಾರಾಟ ಮಾಡುವ ಮಳಿಗೆ/ಗೋದಾಮುಗಳ ವಿರುದ್ಧವೂ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಸಾರಿಗೆ ಸಚಿವರು ಎಚ್ಚರಿಸಿದ್ದಾರೆ. ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಎಐ (AI) ಹಾಗೂ ಎನ್‌ಪಿಆರ್ (ANPR) ಕ್ಯಾಮೆರಾಗಳ ಮೂಲಕ ತಪಾಸಣೆ ತೀವ್ರಗೊಳಿಸಲಾಗಿದ್ದು, ಸವಾರರು ತಕ್ಷಣವೇ ಪ್ರಮಾಣೀಕೃತ ಫುಲ್-ಫೇಸ್ ಹೆಲ್ಮೆಟ್‌ಗಳಿಗೆ ಬದಲಾಗುವಂತೆ ಸೂಚಿಸಲಾಗಿದೆ.












































