ಗ್ರಾಹಕರ ಜೇಬಿಗೆ ಕತ್ತರಿ! ಕೆಜಿ ಸೋನಾ ಮಸೂರಿ ₹100ರ ಸಮೀಪ; 25 ಕೆಜಿ ಚೀಲಕ್ಕೆ ಭಾರಿ ಬೆಲೆ ಏರಿಕೆ!

Picture of Savistara

Savistara

Bureau Report

​ಬೆಂಗಳೂರು: ರಾಜ್ಯದಲ್ಲಿ ಅಗತ್ಯ ವಸ್ತುಗಳ ದರ ಏರಿಕೆಯ ನಡುವೆಯೇ ಸಾರ್ವಜನಿಕರಿಗೆ ಮತ್ತೊಂದು ಆಘಾತ ಎದುರಾಗಿದೆ. ಕಳೆದ ನಾಲ್ಕು ತಿಂಗಳಲ್ಲಿ 4ನೇ ಬಾರಿಗೆ ಅಕ್ಕಿ ದರ (Karnataka Rice Price Hike) ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದ್ದು, ಗ್ರಾಹಕರು ಬೆಲೆ ಕೇಳಿ ಬೆಚ್ಚಿಬೀಳುವಂತಾಗಿದೆ.​ಸೋನಾ ಮಸೂರಿ ಚೀಲಕ್ಕೆ ₹390-400 ಏರಿಕೆ:ಯಶವಂತಪುರ ಸಗಟು ಮಾರುಕಟ್ಟೆಯಲ್ಲಿ 25 ಕೆ.ಜಿ. ಸೋನಾ ಮಸೂರಿ ಅಕ್ಕಿ ಚೀಲದ ದರ ₹1,430 ರಿಂದ ₹1,820 ಕ್ಕೆ ಹೆಚ್ಚಾಗಿದೆ. ಚಿಲ್ಲರೆ ಮಾರುಕಟ್ಟೆಯಲ್ಲಿ ಕೆ.ಜಿ. ಸೋನಾ ಮಸೂರಿ ದರ ₹90 ರಿಂದ ₹100 ರ ಸಮೀಪಕ್ಕೆ ತಲುಪಿದೆ.​

ವಿವಿಧ ತಳಿಯ ಅಕ್ಕಿ ದರಗಳ ವಿವರ (ಕೆ.ಜಿ.ಗೆ):​

ಸೋನಾ ಮಸೂರಿ: ₹100 ರ ಗಡಿ ಸಮೀಪ (25 ಕೆಜಿ ಚೀಲಕ್ಕೆ ₹1,820)​

ರಾಜಮುಡಿ ಅಕ್ಕಿ: ₹125 ರಿಂದ ₹150

​ಜೀರಾ ರೈಸ್: ₹115 ರಿಂದ ₹125​

ಬಾಸುಮತಿ ಅಕ್ಕಿ: ₹105 ರಿಂದ ₹120​

ಕೋಲಂ ಅಕ್ಕಿ: ₹75 ರಿಂದ ₹110

​ಸ್ಟೀಮ್ ಅಕ್ಕಿ: ₹60 ರಿಂದ ₹88​

ಬೆಲೆ ಏರಿಕೆಗೆ ಪ್ರಮುಖ ಕಾರಣಗಳು:ಮುಂಗಾರು ಮಳೆ ಕೈಕೊಟ್ಟ ಪರಿಣಾಮ ರಾಯಚೂರು, ಸಿಂಧನೂರು, ಸಿರಗುಪ್ಪ ಹಾಗೂ ಭದ್ರಾವತಿ ಭಾಗಗಳಲ್ಲಿ ಭತ್ತದ ಉತ್ಪಾದನೆ ಕ್ಷೀಣಿಸಿದೆ. ಇದರ ಜೊತೆಗೆ ನೆರೆಯ ಆಂಧ್ರಪ್ರದೇಶ ಹಾಗೂ ತಮಿಳುನಾಡಿನಲ್ಲೂ ಅಕ್ಕಿ ಇಳುವರಿ ಶೇ.50ರಷ್ಟು ಕಡಿಮೆಯಾಗಿದ್ದು, ಪೂರೈಕೆಯ ಕೊರತೆಯೇ ಈ ಬೆಲೆ ಏರಿಕೆಗೆ ಮುಖ್ಯ ಕಾರಣವಾಗಿದೆ. ಮುಂಬರುವ ದಿನಗಳಲ್ಲಿ ದರ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ ಎಂದು ವ್ಯಾಪಾರಿಗಳು ಎಚ್ಚರಿಸಿದ್ದಾರೆ.

News Updates

ಎಸ್‌ಐಆ‌ರ್ ವಿಚಾರದಲ್ಲಿ ಬಿಜೆಪಿ ಕಾರ್ಯಕರ್ತರ ಬೆದರಿಸಿದರೆ ಸುಮ್ಮನಿರಲ್ಲ: ಪೊಲೀಸರಿಗೆ ಸಂಸದ ಕ್ಯಾ. ಚೌಟ ಎಚ್ಚರಿಕೆ – ಕಾಂಗ್ರೆಸ್ ತನ್ನ ಆರೋಪಗಳಿಗೆ ಸೂಕ್ತ ಸಾಕ್ಷ್ಯಾಧಾರಗಳನ್ನು ಒದಗಿಸಲಿ ಅಕ್ರಮವಾಗಿ ಮತ ರದ್ದು -ಮಾಡಲಾದ ವ್ಯಕ್ತಿಯನ್ನು ತಂದು ಚುನಾವಣಾಧಿಕಾರಿ ಮುಂದೆ ನಿಲ್ಲಿಸಲಿ: ಸಂಸದ ಸವಾಲು

News Updates

ಕೇಂದ್ರ ಸರ್ಕಾರದಿಂದ ಶಿವಮೊಗ್ಗ ನಗರ ಬೈಪಾಸ್ ಹಾಗೂ ನಗರ ವ್ಯಾಪ್ತಿಯ ಹೆದ್ದಾರಿ ಅಭಿವೃದ್ಧಿಗೆ 466.74 ಕೋಟಿ ರೂ. ಮಂಜೂರು; ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ ಕೃತಜ್ಞತೆ ಸಲ್ಲಿಸಿದ ಸಂಸದ ಬಿ.ವೈ. ರಾಘವೇಂದ್ರ

[t4b-ticker]
error: Content is protected !!