Republic Day2026: ಕರ್ತವ್ಯಪಥದ ಮೇಲೆ ಹೂ ಮಳೆ, ಸೇನಾ ಶಕ್ತಿಯ ಅನಾವರಣ

Picture of Savistara

Savistara

Bureau Report

ನವದೆಹಲಿ: ದೇಶದಾದ್ಯಂತ 77ನೇ ಗಣರಾಜ್ಯೋತ್ಸವವನ್ನುಸಂಭ್ರಮದಿಂದ ಆಚರಿಸಲಾಗುತ್ತಿದ್ದು, ಎಲ್ಲೆಡೆ ಬಿಗಿ ಭದ್ರತೆ ವಹಿಸಲಾಗಿದೆ. ರಾಷ್ಟ್ರರಾಜಧಾನಿಯ ಕರ್ತವ್ಯ ಪಥದಲ್ಲಿ ನಡೆಯುತ್ತಿರುವ ಸ್ಥಭ್ರಚಿತ್ರಗಳ ಮೆರವಣಿಗೆಯು ಸಾಂಸ್ಕೃತಿಕ ವೈವಿಧ್ಯತೆಯನ್ನು ಅನಾವರಣಗೊಳಿಸಿದೆ.

ಇದೇ ವೇಳೆ, ಸೇನೆಯ Mi-17 1V ಹೆಲಿಕಾಪ್ಟರ್‌ಗಳು ಕರ್ತವ್ಯ ಪಥದ ಮೇಲೆ ಹೂಮಳೆ ಸುರಿಸಿದವು. ಗ್ರೂಪ್ ಕ್ಯಾಪ್ಟನ್ ಅಲೋಕ್ ಅಹ್ಲಾವತ್ ಅವರು ಹೆಲಿಕಾಪ್ಟರ್ ಕಾರ್ಯಾಚರನೆಯ ನೇತೃತ್ವ ವಹಿಸಿದ್ದರು.ಪಥಸಂಚನದ ವೇಳೆ ಸೇನಾ ಶಕ್ತಿಯ ಅನಾವರಣಗೊಂಡಿದೆ. ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ (ಡಿಆರ್‌ಡಿಒ) ಹೈಪರ್‌ಸಾನಿಕ್ ಕ್ಷಿಪಣಿಗಳನ್ನು ಇದೇ ಮೊದಲ ಬಾರಿಗೆ ಪ್ರದರ್ಶಿಸಿದೆ. ಇದೇ ವೇಳೆ, ಬ್ರಹ್ಮಸ್ ಕ್ಷಿಪಣಿ ವ್ಯವಸ್ಥೆಯೂ ಪ್ರದರ್ಶನಗೊಂಡಿದೆ.ಅಪಾಚೆ ಯುದ್ಧ ಹೆಲಿಕಾಪ್ಟರ್‌ಗಳು ಗಮನ ಸೆಳೆದವು. ಮೂರೂ ಸೇನೆಗಳ ಒಗ್ಗಟ್ಟನ್ನು ಸಾರುವ ಸ್ಥಬ್ಧಚಿತ್ರವು ಮೆರವಣಿಗೆಯಲ್ಲಿ ಸಾಗಿತು.

ಮೆರವಣಿಗೆಯಲ್ಲಿ ಯುರೋಪಿಯನ್ ಒಕ್ಕೂಟದ ತಂಡವೂ ಪಾಲ್ಗೊಂಡಿದ್ದು ವಿಶೇಷ. ಯಶಸ್ಸಿನತ್ತ ಸಾಗುತ್ತಿರುವ ಭಾರತವು ಜಗತ್ತನ್ನು ಸ್ಥಿರತೆ, ಸಮೃದ್ಧಿ ಮತ್ತು ಸುರಕ್ಷಿತೆಯತ್ತ ಕೊಂಡೊಯ್ಯುತ್ತಿದೆ ಎಂದು ಒಕ್ಕೂಟದ ಮುಖ್ಯಸ್ಥೆ ಉರ್ಸುಲಾ ವಾನ್ ಡೆರ್ ಲೇಯೆನ್ ಹೇಳಿದ್ದಾರೆ.

News Updates

ಕೇಂದ್ರ ಸರ್ಕಾರದಿಂದ ಶಿವಮೊಗ್ಗ ನಗರ ಬೈಪಾಸ್ ಹಾಗೂ ನಗರ ವ್ಯಾಪ್ತಿಯ ಹೆದ್ದಾರಿ ಅಭಿವೃದ್ಧಿಗೆ 466.74 ಕೋಟಿ ರೂ. ಮಂಜೂರು; ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ ಕೃತಜ್ಞತೆ ಸಲ್ಲಿಸಿದ ಸಂಸದ ಬಿ.ವೈ. ರಾಘವೇಂದ್ರ

[t4b-ticker]
error: Content is protected !!