ಚಿನ್ನ, ಬೆಳ್ಳಿ ನಾಗಾಲೋಟಕ್ಕೆ ಸದ್ಯಕ್ಕೆ ಬೀಳಲ್ಲ ಕಡಿವಾಣ

Picture of Savistara

Savistara

Bureau Report

ಜಾಗತಿಕ ಆರ್ಥಿಕ ಹಾಗೂ ರಾಜಕೀಯ ಬಿಕ್ಕಟ್ಟಿನಿಂದ ಚಿನ್ನ ಬೆಳ್ಳಿ ದರ FRO ಶರವೇಗದಲ್ಲಿ ಏರಿಕೆಯಾಗುತ್ತಲೇ ಇದೆ. ಮುಂಬರುವ ತಿಂಗಳಲ್ಲಿ 10 ಅಪರಂಜಿ ಚಿನ್ನದ ಬೆಲೆ 1,80,000 ರೂ.ಗೆ ಮುಟ್ಟುವ ಸಾಧ್ಯತೆ ಇದೆ ಎಂದು ತಜ್ಞರು ಅಂದಾಜಿಸಿದ್ದಾರೆ. ಇನ್ನೊಂದೆಡೆ ಬೆಳ್ಳಿ ದರವು ಕೇವಲ ಎರಡು ವಹಿವಾಟು ದಿನಗಳಲ್ಲಿ 48 35,000 ರೂ. ಏರಿಕೆಯಾಗಿದೆ.ರಿಫಿನಿಟಿವ್ ಹಾಗೂ ವಿಂಜಲ್ ಒನ್ ಸಂಶೋಧನೆ ಪ್ರಕಾರ, 2025ರಲ್ಲಿ ಚಿನ್ನದ ಬೆಲೆಯಲ್ಲಿ ಶೇ.80ರಷ್ಟು ಏರಿಕೆಯಾಗಿದೆ. ಶುದ್ಧ ಬಂಗಾರದ ದರವು 2024ರ ವರ್ಷಾಂತ್ಯಕ್ಕೆ 10 ಗ್ರಾಂಗೆ 76,748 ರೂ. ಇದ್ದುದು, ವರ್ಷಾಂತ್ಯಕ್ಕೆ 1,38,000 ರೂ. ತಲುಪಿತ್ತು. “2025ರಲ್ಲಿ ಜಾಗತಿಕ ದರ ಶೇ.60-70ರಷ್ಟು ಏರಿಕೆಯಾಗಿದ್ದು, ಈ ವರ್ಷ ಈಗಾಗಲೇ ಶೇ.6ರಷ್ಟು ಜಂಪ್ ಆಗಿದೆ,” ಎಂದು ವರ್ಲ್ಡ್ ಗೋಲ್ಡ್ ಕೌನ್ಸಿಲ್ ಹೇಳಿದೆ.ಪ್ರತಿಸುಂಕ, ಜಾಗತಿಕ ರಾಜಕೀಯ ಬಿಕ್ಕಟ್ಟು ಬಡ್ಡಿದರ ಕಡಿತ, ಕೇಂದ್ರ ಬ್ಯಾಂಕ್ ಗಳಿಂದ ಚಿನ್ನ ಶೇಖರಣೆ ಮುಂತಾದ ಅಂಶಗಳಿಂದಾಗಿ ಜಾಗತಿಕವಾಗಿ ಚಿನ್ನದ ದರ ಒಂದು ಔನ್ಸ್‌ಗೆ 5,500 ಡಾಲರ್‌ಗೆ (ಒಂದು ಔನ್ಸ್‌ಗೆ 28.34 ಗ್ರಾಂ) ತಲುಪ ಲಿದೆ. ಕೆಲವೇ ದಿನಗಳಲ್ಲಿ ದೇಶಿಯವಾಗಿ 10 ಗ್ರಾಂ ಅಪರಂಜಿ ಚಿನ್ನದ ಬೆಲೆ 1,72,000 ರೂ. ತಲುಪಲಿದೆ ಎನ್ನಲಾಗಿದೆ.

ಚಿನ್ನದ ಮೇಲಿನ ಹೆಚ್ಚಳವಾಗುತ್ತಿದೆ. ಅಪಾಯ ಕಡಿಮೆ ಏರಿಕೆಯಾಗಲಿದೆ ಎಂದು ಎಚ್‌ಡಿಎಫ್‌ಸಿ ಸೆಕ್ಯೂರಿಟಿಸ್‌ನ ಇರುವುದರಿಂದ ಹೂಡಿಕೆ ಪ್ರಮಾಣವು ಹೆಚ್ಚಳವಾಗುತ್ತಿದೆ. ಚಿನ್ನದ ಬೆಲೆ ಇನ್ನಷ್ಟು ಹಿರಿಯ ವಿಶ್ಲೇಷಕ

ಸೌಮಿಲ್ ಗಾಂಧಿ ತಿಳಿಸಿದ್ದಾರೆ.ನಿಲುಕದ ಬೆಳ್ಳಿ: ಕೇವಲ 48 ಗಂಟೆ ಅಂದರೆಎರಡು ವಹಿವಾಟು ದಿನಗಳಲ್ಲಿ 35 ಸಾವಿರ ರೂ. ಜಂಪ್. ಇದು ಚಿನಿವಾರ ಪೇಟೆಯಲ್ಲಿ ದೊಡ್ಡ ಅಚ್ಚರಿಯನ್ನುಂಟು ಮಾಡಿದೆ. ಕಳೆದ 10 ದಿನಗಳಲ್ಲಿ ರಜತದ ಬೆಲೆ ಶೇ. 25ರಷ್ಟು ಏರಿಕೆಯಾಗಿದೆ. ಇತ್ತೀಚಿನ ವರ್ಷಗಳಲ್ಲಿ ಈ ಮಟ್ಟದ ಏರಿಕೆ ಎಂದೂ ಕೂಡ ಆಗಿರಲಿಲ್ಲ. ಜಾಗತಿಕ ಮತ್ತು ಸ್ಥಳೀಯವಾಗಿ ಬೆಳ್ಳಿ ಹೂಡಿಕೆ ಹವಾ ಉಂಟಾಗಿದೆ. ಬಡವರ ಪಾಲಿಗೆ ಬೆಳ್ಳಿಯೇ ಬಂಗಾರ ಎಂಬ ನಂಬಿಕೆ ಬಲವಾಗಿದೆ. ಇದಕ್ಕೆ ಈಗ ದೊಡ್ಡ ಸವಾಲು ಉಂಟಾಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಒಂದು ಔನ್‌ಗೆ ಮಂಗಳವಾರ ಶೇ. 5ರಷ್ಟು ಏರಿಕೆಯಾಗಿ 110 ಡಾಲ‌ರ್ಗೆಗೆ ಮುಟ್ಟಿದೆ. ಬೆಂಗಳೂರು ಮತ್ತು ದಿಲ್ಲಿಯಲ್ಲಿ ಮಂಗಳವಾರ 10,000 ರೂ. ಏರಿ, ಕೆ.ಜಿಗೆ 3,70,000 ರೂ.ಆಗಿದೆ. ಚಿನ್ನದ ಧಾರಣೆಯಲ್ಲಿ ಯಾವುದೇ ಏರಿಳಿತಗಳಾಗಿಲ್ಲ.

News Updates

ನಿಮ್ಮಪ್ಪನಿಂದಲೇ ಆರ್‌ಎಸ್‌ಎಸ್‌ಗೆ ಏನು ಮಾಡೋಕೆ ಆಗಿಲ್ಲ, ನಿಮ್ಮಿಂದ ಆಗುತ್ತಾ? ಅಧಿಕಾರದಲ್ಲಿ ಮೆರೆದವರಿಗೆ ಬಂಗಾಳದ ಜನ್ನು ಅಟ್ಟಾಡಿಸಿ ಹೊಡೆಯುತ್ತಿದ್ದಾರೆ, ಗೃಹ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಸಿಟಿ ರವಿ ವಾಗ್ದಾಳಿ

[t4b-ticker]
error: Content is protected !!