ಭಾರತದ ಜನಸಂಖ್ಯೆಗೆ ಸರಿಸಮಾನವಾಗಿ ಟೆಲಿಕಾಂ ಸಬ್​ಸ್ಕ್ರೈಬ​ರ್ಸ್; ಮೊಬೈಲ್​ ಬಳಕೆದಾರರೇ ಹೆಚ್ಚು!

Picture of Savistara

Savistara

Bureau Report

ನಮ್ಮ ದೇಶದಲ್ಲಿ ಇಲ್ಲಿನ ಜನಸಂಖ್ಯೆಗೆ ಸಮಾನವಾಗಿ ಟೆಲಿಕಾಂ ಸಬ್​ಸ್ಕ್ರೈಬ​ರ್ಸ್ ಕೂಡ​ ಇದ್ದಾರೆ. ಅಂದರೆ ಭಾರತದಲ್ಲಿ ಸುಮಾರು 120 ಕೋಟಿ ದೂರವಾಣಿ ಚಂದಾದಾರರಿರುವ ಬಗ್ಗೆ ಕೇಂದ್ರ ಸರ್ಕಾರ ಅಧಿಕೃತವಾಗಿ ತಿಳಿಸಿದೆ.

Telephone Subscribers Increase: ಏಪ್ರಿಲ್ 2025ರಲ್ಲಿ ದೇಶದಲ್ಲಿ ಒಟ್ಟು ದೂರವಾಣಿ ಚಂದಾದಾರರ ಸಂಖ್ಯೆ 120.38 ಕೋಟಿಗಳಾಗಿದ್ದು, ಇದರಲ್ಲಿ ಮಾಸಿಕ ಆಧಾರದ ಮೇಲೆ ಶೇ.0.25ರಷ್ಟು ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಇದರಲ್ಲಿ ಮೊಬೈಲ್ ಚಂದಾದಾರರು 116.64 ಕೋಟಿ ಮತ್ತು ಸ್ಥಿರ ದೂರವಾಣಿ ಚಂದಾದಾರರ ಸಂಖ್ಯೆ 3.74 ಕೋಟಿ ಇದ್ದು, ಕ್ರಮವಾಗಿ ಶೇ.0.23 ಮತ್ತು ಶೇ.1ರಷ್ಟು ಏರಿಕೆ ಕಂಡುಬಂದಿದೆ.ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (TRAI) ಬಿಡುಗಡೆ ಮಾಡಿದ ಮಾಸಿಕ ಮಾಹಿತಿಯ ಪ್ರಕಾರ, ಏಪ್ರಿಲ್ 2025ರಲ್ಲಿ 19.5 ಲಕ್ಷ ಹೊಸ ಮೊಬೈಲ್ ಚಂದಾದಾರರನ್ನು ಸೇರಿಸಲಾಗಿದೆ. ಆದರೆ ಲ್ಯಾಂಡ್​​ಲೈನ್​ ದೂರವಾಣಿಯಲ್ಲಿ ಅಲ್ಪ ಹೆಚ್ಚಳವಾಗಿದೆ. ಒಟ್ಟಾರೆ, 19.6 ಲಕ್ಷ ಹೊಸ ಗ್ರಾಹಕರನ್ನು ಸೇರ್ಪಡೆಯಾಗಿದೆ.ಮಾರ್ಚ್ ಅಂತ್ಯದಲ್ಲಿ 666.11 ಮಿಲಿಯನ್‌ ಇದ್ದ ನಗರ ದೂರವಾಣಿ ಚಂದಾದಾರರ ಸಂಖ್ಯೆಯು ಏಪ್ರಿಲ್ ಅಂತ್ಯದಲ್ಲಿ 667.19 ಮಿಲಿಯನ್‌ಗೆ ತಲುಪಿದೆೆ. ಗ್ರಾಮೀಣ ಚಂದಾದಾರರು ಸಹ 534.69 ಮಿಲಿಯನ್‌ನಿಂದ 536.65 ಮಿಲಿಯನ್‌ಗೆ ಏರಿಕೆಯಾಗಿದ್ದಾರೆ. ನಗರ ಮತ್ತು ಗ್ರಾಮೀಣ ದೂರವಾಣಿ ಚಂದಾದಾರರ ಮಾಸಿಕ ಬೆಳವಣಿಗೆ ದರವು ಏಪ್ರಿಲ್‌ನಲ್ಲಿ ಕ್ರಮವಾಗಿ ಶೇ.0.16 ಮತ್ತು ಶೇ.0.37ರಷ್ಟಿದೆ ಎಂದು ಸಂವಹನ ಸಚಿವಾಲಯ ತಿಳಿಸಿದೆ.ಒಟ್ಟು ವೈರ್‌ಲೆಸ್ (ಮೊಬೈಲ್+5G FWA) ಚಂದಾದಾರರು ಏಪ್ರಿಲ್‌ನಲ್ಲಿ 1,166.43 ಮಿಲಿಯನ್‌ಗೆ ಏರಿಕೆಯಾಗಿದ್ದು, ಮಾಸಿಕ ಬೆಳವಣಿಗೆ ದರ ಶೇ.0.23ರಷ್ಟಿದೆ. ಡಾಟಾ ಪ್ರಕಾರ, ಇದೇ ಅವಧಿಯಲ್ಲಿ ನಗರ ಪ್ರದೇಶಗಳಲ್ಲಿ ಒಟ್ಟು ವೈರ್‌ಲೆಸ್ ಚಂದಾದಾರರ ಸಂಖ್ಯೆ 632.57 ಮಿಲಿಯನ್‌ನಿಂದ 633.29 ಮಿಲಿಯನ್‌ಗೆ ಏರಿದೆ, ಆದರೆ ಗ್ರಾಮೀಣ ಪ್ರದೇಶಗಳಲ್ಲಿ ಚಂದಾದಾರರ ಸಂಖ್ಯೆ 531.18 ಮಿಲಿಯನ್‌ನಿಂದ 533.14 ಮಿಲಿಯನ್‌ಗೆ ತಲುಪಿದೆ. ನಗರ ಮತ್ತು ಗ್ರಾಮೀಣ ವೈರ್‌ಲೆಸ್ ಚಂದಾದಾರರ ಮಾಸಿಕ ಬೆಳವಣಿಗೆಯ ದರ ಕ್ರಮವಾಗಿ ಶೇ.0.11 ಮತ್ತು ಶೇ.0.37ರಷ್ಟಿದೆ.

ಮಾರ್ಚ್ ಅಂತ್ಯದಲ್ಲಿ ಶೇ.85.04ರಷ್ಟಿದ್ದ ಒಟ್ಟಾರೆ ಟೆಲಿ-ಸಾಂದ್ರತೆಯು ಏಪ್ರಿಲ್ ಅಂತ್ಯದಲ್ಲಿ ಶೇ.85.19ಕ್ಕೆ ಹೆಚ್ಚಳವಾಗಿದೆ. ಮಾರ್ಚ್ ಅಂತ್ಯದಲ್ಲಿ ಶೇ.131.45ರಷ್ಟಿದ್ದ ನಗರ ಟೆಲಿ-ಡೆನ್ಸಿಟಿ ಏಪ್ರಿಲ್ ಅಂತ್ಯದಲ್ಲಿ ಶೇ.131.46ಕ್ಕೆ ಏರಿತು. ಗ್ರಾಮೀಣ ಟೆಲಿ-ಡೆನ್ಸಿಟಿ ಅದೇ ಅವಧಿಯಲ್ಲಿ ಶೇ.59.06ರಿಂದ ಶೇ.59.26ಕ್ಕೆ ತಲುಪಿದೆ.ಏಪ್ರಿಲ್ 30ರ ಹೊತ್ತಿಗೆ ಖಾಸಗಿ ಪ್ರವೇಶ ಸೇವಾ ಪೂರೈಕೆದಾರರು ವೈರ್‌ಲೆಸ್ (ಮೊಬೈಲ್) ಚಂದಾದಾರರ ಮಾರುಕಟ್ಟೆಯ ಶೇ.92.08ರಷ್ಟು ಪಾಲನ್ನು ಹೊಂದಿದ್ದಾರೆ. ಆದರೆ ಎರಡು ಪಿಎಸ್‌ಯು ಪ್ರವೇಶ ಸೇವಾ ಪೂರೈಕೆದಾರರಾದ ಬಿಎಸ್‌ಎನ್‌ಎಲ್ ಮತ್ತು ಎಂಟಿಎನ್‌ಎಲ್ ಕೇವಲ ಶೇ.7.92ರಷ್ಟು ಮಾರುಕಟ್ಟೆ ಪಾಲು ಹೊಂದಿದ್ದವು ಎಂದು ಡಾಟಾ ಪ್ರಕಾರ ತಿಳಿದುಬಂದಿದೆ.ಭಾರ್ತಿ ಏರ್‌ಟೆಲ್ ಲಿಮಿಟೆಡ್ ಶೇ.53.35ರಷ್ಟು ಮಾರುಕಟ್ಟೆ ಪಾಲು ಹೊಂದಿರುವ 37.28 ಮಿಲಿಯನ್ ಮೆಷಿನ್-ಟು-ಮೆಷಿನ್ (M2M) ಸೆಲ್ಯುಲಾರ್ ಮೊಬೈಲ್ ಸಂಪರ್ಕಗಳಲ್ಲಿ ಅತಿ ಹೆಚ್ಚಿನದಾಗಿದ್ದು, ನಂತರ ವೊಡಾಫೋನ್ ಐಡಿಯಾ ಲಿಮಿಟೆಡ್ ಇದೆ. ಏಪ್ರಿಲ್‌ನಲ್ಲಿ, 13.48 ಮಿಲಿಯನ್ ಚಂದಾದಾರರು ಮೊಬೈಲ್ ಸಂಖ್ಯೆ ಪೋರ್ಟಬಿಲಿಟಿಗಾಗಿ (MNP) ಮನವಿ ಸಲ್ಲಿಸಿರುವುದು ಗಮನಾರ್ಹವಾಗಿದೆ.

[t4b-ticker]
error: Content is protected !!