ರೈತರಿಗೆ ಬಂಪರ್ ಸಾರ್ವಕಾಲಿಕ ದಾಖಲೆ ಬರೆದ ಕೊಬ್ಬರಿ ಬೆಲೆ!

Picture of Savistara

Savistara

Bureau Report

ತುಮಕೂರು: ತಿಪಟೂರು ಮಾರುಕಟ್ಟೆಯಲ್ಲಿ ಗುರುವಾರ ಕ್ವಿಂಟಾಲ್ ಕೊಬ್ಬರಿ ಬರೋಬ್ಬರಿ 21,809 ರೂ. ಗೆ ಮಾರಾಟವಾಗಿ ಸಾರ್ವಕಾಲಿಕ ದಾಖಲೆ ಬರೆದಿದೆ. ಮೇ 12ರಂದು 18,244ರೂ.ಗೆ ಮಾರಾಟವಾಗಿದ್ದ ಕೊಬ್ಬರಿ 15 ದಿನಗಳ ಅಂತರದಲ್ಲೇ 21,809ರೂ.ಗೆ ತಲುಪಿದೆ. ಗುರುವಾರ ಮಾರುಕಟ್ಟೆಗೆ 2,613 ಕ್ವಿಂಟಾಲ್ ಕೊಬ್ಬರಿ ಬಂದಿದ್ದು, ಸರಾಸರಿ 20,500 ರೂ. ನಂತೆ ಮಾರಾಟವಾಗಿದೆ. ಕನಿಷ್ಠ ದರ 20000,

ಗರಿಷ್ಠ 21,809ರೂ. ದಾಖಲಾಗಿರುವುದು ತೆಂಗು ಸೀಮೆಯಲ್ಲಿ ಅಚ್ಚರಿ ಮೂಡಿಸಿದೆ. ತಮಿಳುನಾಡು ಜತೆಗೆ ಉತ್ತರ ಭಾರತ ಭಾಗದಲ್ಲೂ ತಿಪಟೂರು ಕೊಬ್ಬರಿಗೆ ಬೇಡಿಕೆ ಹೆಚ್ಚಾಗಿದೆ. ಇಳುವರಿ ಕುಂಠಿತವಾಗಿರುವ ಕಾರಣಕ್ಕೆ ಪೂರೈಕೆ ಕಡಿಮೆ ಯಾಗಿರುವುದು, ಮಾರುಕಟ್ಟೆಯಲ್ಲಿ ಇತ್ತೀಚೆಗೆ ತಂದಿರುವ ಕ್ರಾಂತಿಕಾರಕ ನಿರ್ಧಾರ ಬೆಲೆ ಹೆಚ್ಚಳಕ್ಕೆ ಕಾರಣವಾಗಿವೆ. ಕೊಬ್ಬರಿ ಬೆಲೆ ಹೆಚ್ಚಳದ ಬೆನ್ನಲ್ಲೇ ತೆಂಗಿನಕಾಯಿ ಬೆಲೆ 50 ರೂ. ದಾಟಿದೆ.

News Updates

ಎಸ್‌ಐಆ‌ರ್ ವಿಚಾರದಲ್ಲಿ ಬಿಜೆಪಿ ಕಾರ್ಯಕರ್ತರ ಬೆದರಿಸಿದರೆ ಸುಮ್ಮನಿರಲ್ಲ: ಪೊಲೀಸರಿಗೆ ಸಂಸದ ಕ್ಯಾ. ಚೌಟ ಎಚ್ಚರಿಕೆ – ಕಾಂಗ್ರೆಸ್ ತನ್ನ ಆರೋಪಗಳಿಗೆ ಸೂಕ್ತ ಸಾಕ್ಷ್ಯಾಧಾರಗಳನ್ನು ಒದಗಿಸಲಿ ಅಕ್ರಮವಾಗಿ ಮತ ರದ್ದು -ಮಾಡಲಾದ ವ್ಯಕ್ತಿಯನ್ನು ತಂದು ಚುನಾವಣಾಧಿಕಾರಿ ಮುಂದೆ ನಿಲ್ಲಿಸಲಿ: ಸಂಸದ ಸವಾಲು

[t4b-ticker]
error: Content is protected !!