ಕ್ಯಾನ್ಸರ್ ಕಾರಕ ಎಂಬ ನೆಪ | 400 ಮಿಲಿಯನ್ ಡಾಲರ್ ವಹಿವಾಟು ನಷ್ಟದ ಆತಂಕ | ಅಡಕೆ ಹಾಳೆ ಉತ್ಪನ್ನಗಳಿಗೆ ಟ್ರಂಪ್ ಆಘಾತ

Picture of Savistara

Savistara

Bureau Report

ಎರಡನೇ ಬಾರಿ ಅಮೆರಿಕ ಅಧ್ಯಕ್ಷರಾದ ಬಳಿಕ ಜಾಗತಿಕ ತೆರಿಗೆ ಸಮರ ಸಾರಿರುವ ಡೊನಾಲ್ಡ್ ಟ್ರಂಪ್ ಕಣ್ಣೀಗ ಭಾರತದ ಅಡಕೆ ಉತ್ಪನ್ನಗಳ ಮೇಲೂ ಬಿದ್ದಿದೆ. ಕ್ಯಾನ್ಸರ್ ಕಾರಕ ಎಂಬ ವರದಿಯ ನೆಪ ಮುಂದಿಟ್ಟುಕೊಂಡು ಅಡಕೆ ಹಾಳೆ ಉತ್ಪನ್ನಗಳನ್ನು ಅಮೆರಿಕದಲ್ಲಿ ನಿಷೇಧಿಸಲಾಗಿದೆ.

ಅಮೆಜಾನ್‌ನಂತಹ ಆನ್ ಲೈನ್ ಶಾಪಿಂಗ್ ಮೂಲಕ ಈ ಉತ್ಪನ್ನ ಅಮೆರಿಕದಲ್ಲಿ ಜನಪ್ರಿಯಗೊಂಡಿದೆ. ಆದರೆ ನಿಷೇಧ ಆದೇಶದ ಪರಿಣಾಮ ಭಾರತಕ್ಕೆ ವಾರ್ಷಿಕ ಸುಮಾರು 400 ಮಿಲಿಯನ್ ಡಾಲರ್‌ನಷ್ಟು ವಹಿವಾಟು ನಷ್ಟವಾಗುವ ಸಾಧ್ಯತೆಯಿದೆ ಎನ್ನುತ್ತಾರೆ ಪರಿಣತರು. ಅಡಕೆ ಹಾಳೆ ಉತ್ಪನ್ನಗಳನ್ನು ಉದ್ದಿಮೆದಾರರು ಅಮದು ಮಾಡಿಕೊಳ್ಳಬಾರದು. ಅಂತಹ ಉತ್ಪನ್ನಗಳ ದಾಸ್ತಾನು, ಮಾರಾಟ ಹಾಗೂ ಸಾಗಣೆ ಅಮೆರಿಕದಲ್ಲಿ ಕಾನೂನುಬದ್ಧವಲ್ಲ ಎಂದು ಅಲ್ಲಿನ ಸರ್ಕಾರ ಮೇ 5ರಂದು ಆದೇಶ ಹೊರಡಿಸಿದೆ.ಕಾರಣವೇನು?: ಅಡಕೆ ಕ್ಯಾನ್ಸ‌ರ್ಕಾರಕ ಎಂದು ವಿಶ್ವ ಆರೋಗ್ಯ ಸಂಸ್ಥೆ ವರದಿ ನೀಡಿದೆ. ಹೀಗಾಗಿಅಡಕೆ ಹಾಳೆಯ ಯಾವುದೇ ಉತ್ಪನ್ನ ಬಳಸುವುದು ಕ್ಯಾನ್ಸರ್ ಇಲ್ಲವೆ ಬೇರೆ ಆರೋಗ್ಯ ಸಮಸ್ಯೆಗಳಿಗೆ ಕಾರಣ ಆಗಬಹುದು. ಹೀಗಾಗಿ ದೇಶದಲ್ಲಿ ಬಳಕೆ ಮಾಡದಿರಲು ತೀರ್ಮಾನಿಸಲಾಗಿದೆ ಎಂದು ಅಮೆರಿಕ ಹೇಳಿಕೊಂಡಿದೆ. ಬಿದ್ದ ಅಡಕೆ ಹಾಳೆಗಳಿಗೆ ಯಾಂತ್ರಿಕವಾಗಿ ರೂಪ ನೀಡಲಾಗುತ್ತದೆ. ಅದು ಆರೋಗ್ಯದ ಮೇಲೆ ಯಾವ ಪರಿಣಾಮ ಬೀರಬಲ್ಲದು ಎಂಬ ಪರೀಕ್ಷೆ ನಡೆಸಿಲ್ಲ. ಉತ್ಪನ್ನ ಹಾಗೂ ನಾವು ಸೇವಿಸುವ ಆಹಾರ ನೇರವಾಗಿ ಸಂಪರ್ಕಕ್ಕೆ ಬರುವುದರಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತದೆ ಎಂದು ನಿಷೇಧಕ್ಕೆ ಕಾರಣ ನೀಡಲಾಗಿದೆ.

ವರದಿ ನೀಡಿದ್ದು ಎಫ್‌ಡಿಎ: ಅಮೆರಿಕದಲ್ಲಿ ಆಹಾರ ಉತ್ಪನ್ನ ಹಾಗೂಔಷಧಗಳ ಗುಣಮಟ್ಟ ಹಾಗೂ ಸುರಕ್ಷತೆ ಖಾತ್ರಿಪಡಿಸಲು ಅಲ್ಲಿನ ಸರ್ಕಾರ ಎಫ್‌ಡಿಎ (ಫುಡ್ ಆ್ಯಂಡ್ ಡ್ರಗ್ ಅಡ್ಮಿನಿಸ್ಟೇಷನ್) ಎಂಬ ಪ್ರತ್ಯೇಕ ವಿಭಾಗ ಹೊಂದಿದೆ. ಈ ವಿಭಾಗದಲ್ಲಿ ಹಿರಿಯ ವಿಜ್ಞಾನಿಗಳು ಹಾಗೂ ವಿವಿಧ ವಲಯಗಳ ಪರಿಣತರು ಕಾರ್ಯನಿರ್ವಹಿಸುತ್ತಾರೆ. ಆ ವಿಭಾಗದಿಂದ ಅಡಕೆ ಹಾಳೆಯ ಉತ್ಪನ್ನಗಳ ಬಗ್ಗೆ ಅಧ್ಯಯನ ನಡೆದ ಬಳಿಕ ವರದಿ ಸಲ್ಲಿಸಲಾಗಿತ್ತು.

ಮುಂದಿನ ಪರಿಣಾಮಗಳೇನು?:

  • ಅಡಕೆ ಹಾಳೆ ಉತ್ಪನ್ನ ರಪ್ತಿನಲ್ಲಿ ಶೇ.75ಅಮೆರಿಕಕ್ಕೆ ಕಳಿಸಲಾಗುತ್ತದೆ. ಕೆನಡಾ, ಆಸ್ಟ್ರೇಲಿಯಾ, ಇಂಗ್ಲೆಂಡ್‌ನಲ್ಲೂ ಬೇಡಿಕೆಯಿದೆ. ಈ ದೇಶಗಳು ಬಹಳಷ್ಟು ವಿಚಾರಗಳಲ್ಲಿ ಎಫ್‌ಡಿಎ ನಡೆ ಅನುಸರಿಸುತ್ತವೆ. ಇದರಿಂದ ಭವಿಷ್ಯದಲ್ಲಿ ಈ ದೇಶಗಳೂ ಆಮದಿನಿಂದ ಹಿಂದೆ ಸರಿಯಬಹುದು.
  • ಅಡಕೆಗೆ ಕ್ಯಾನ್ಸರ್ ಕಳಂಕ ಅಂಟಿಸಿದಂತೆ ದೇಶದೊಳಗೂ ಅಡಕೆ ಹಾಳೆಯ ಉತ್ಪನ್ನ ಮಾರುಕಟ್ಟೆಯನ್ನು ಹಾಳು ಮಾಡುವ ಹುನ್ನಾರ ನಡೆಯಬಹುದು.
  • ಅಮೆರಿಕ 2022ರಲ್ಲಿ 414 ಮಿಲಿಯನ್ ಡಾಲ‌ರ್ ಮೌಲ್ಯದ ಅಡಕೆ ಹಾಳೆಯ ಉತ್ಪನ್ನಗಳನ್ನು ಆಮದು ಮಾಡಿಕೊಂಡಿತ್ತು. 2031ರ ವೇಳೆಗೆ ಈ ವಹಿವಾಟು 658 ಮಿಲಿಯನ್ ಡಾಲ‌ರ್ ತಲುಪುವ ನಿರೀಕ್ಷೆಯಿತ್ತು.
  • ಅಡಕೆ ಹಾಳೆಯ ಉತ್ಪನ್ನಗಳು ಹೆಚ್ಚಾಗಿ ಸಿದ್ಧವಾಗುವುದು ಕರ್ನಾಟಕದಲ್ಲಿ. ಕಳೆದ ಕೆಲ ವರ್ಷಗಳ ಹಿಂದೆ ಗೃಹ ಕೈಗಾರಿಕೆಯಂತಿದ್ದ ಇದು ಈಗ ಸಣ್ಣ ಕೈಗಾರಿಕೆಯಾಗಿ ಪರಿವರ್ತನೆಯಾಗಿದೆ.
[t4b-ticker]
error: Content is protected !!