ಮಲ್ಪೆ : ಪ್ರವಾಸೋದ್ಯಮ ಇಲಾಖೆಯಿಂದ ಸ್ಟ್ರಿಕ್ಟ್ ಆರ್ಡರ್ : ಬೀಚ್‌ನಲ್ಲಿ ಇನ್ನು ಮೂರು ತಿಂಗಳು ಪ್ರವಾಸಿಗರು ನೀರಿಗಿಳಿಯುವಂತಿಲ್ಲ..!

Picture of Savistara

Savistara

Bureau Report

ಕರಾವಳಿಯಲ್ಲಿ ಮಳೆ ಜೋರಾಗಿದ್ದು,ಕಡಲ ಅಲೆಗಳ ಅಬ್ಬರ ಬಿರುಸುಗೊಂಡಿದೆ. ಮಲ್ಪೆ ಕಡಲತೀರದಲ್ಲಿ ಇನ್ನು ಮೂರು ತಿಂಗಳು ಪ್ರವಾಸಿಗರು ಬಂದರೂ ದೂರದಲ್ಲೇ ನಿಂತು ಆಸ್ವಾದಿಸಬೇಕೇ ಹೊರತು ನೀರಿಗೆ ಇಳಿದು ಮೋಜು, ಮಸ್ತಿ ಮಾಡುವಂತಿಲ್ಲ. ಗಾಳಿ, ಮುಂಗಾರಿನ ಹಿನ್ನೆಲೆಯಲ್ಲಿ ಮಲ್ಪೆ ಕಡಲತೀರದಲ್ಲಿ ಅಲೆಗಳ ಅಬ್ಬರ ಬಿರುಸುಗೊಂಡಿದ್ದು, ಮುನ್ನೆಚ್ಚರಿಕೆ ಕ್ರಮಕ್ಕಾಗಿ ನೀರಿಗಿಳಿಯುವುದಕ್ಕೆ ನಿಷೇಧ ಹೇರಲಾಗಿದೆ.ಮಲ್ಪೆ ಕಡಲ ಕಿನಾರೆಯ ಸೌಂದರ್ಯವನ್ನು ಸವಿಯಲು ದಿನನಿತ್ಯ ಸಾವಿರಾರು ಪ್ರವಾಸಿಗರು ಆಗಮಿಸುತ್ತಾರೆ. ಸಮುದ್ರ ಪ್ರಕ್ಷುಬ್ಧಗೊಂಡು ಅಲೆಗಳ ಅಬ್ಬರ ಜೋರಿದ್ದರೂ ಜೀವರಕ್ಷಕ ದಳದ ಕಣ್ಣು ತಪ್ಪಿಸಿ ನೀರಿಗಿಳಿದು ಅನಾಹುತ ಸಂಭವಿಸುವುದು ಸಾಮಾನ್ಯ. ಬೀಚ್‌ ಸಿಬ್ಬಂದಿಗೆ ಪ್ರವಾಸಿಗರನ್ನು ತಡೆಯುವುದೇ ದೊಡ್ಡ ಕೆಲಸ. ಇದಕ್ಕೆ ಕಡಿವಾಣ ಹಾಕಲು 1 ಕಿ.ಮೀ. ದೂರ ತಡೆಬೇಲಿ ನಿರ್ಮಾಣಗೊಂಡಿದೆ. ಗುರುವಾರದಿಂದ ಕೆಲಸ ಆರಂಭಗೊಂಡಿದ್ದು, ಶನಿವಾರ ಪೂರ್ಣಗೊಂಡಿದೆ.ಸಮುದ್ರತೀರದಿಂದ ಸುಮಾರು 20 ಅಡಿಗಳಷ್ಟು ದೂರ, ಒಂದು ಕಿ.ಮೀ. ಬೀಚ್‌ನ ಉದ್ದಕ್ಕೂ 10ಅಡಿ ಎತ್ತರದಲ್ಲಿ ಫಿಶ್‌ನೆಟ್‌ ಬಳಸಿ ತಡೆಬೇಲಿಯನ್ನು ಹಾಕಲಾಗಿದೆ. ತಡೆಬೇಲಿಯ ಉದ್ದಕ್ಕೂ ಕಂಬಗಳಲ್ಲಿ ಕೆಂಪು ಬಾವುಟವನ್ನು ಎಲ್ಲರಿಗೆ ಗೋಚರಿಸುವಂತೆ ಕಟ್ಟಲಾಗಿದೆ. ನೀರಿಗಿಳಿಯದಂತೆ ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಬರೆಯಲಾಗಿದೆ. ಸಮುದ್ರದ ವಾತಾವರಣವನ್ನು ನೋಡಿಕೊಂಡು ಸೆಪ್ಟಂಬರ್‌ ಆರಂಭದಲ್ಲಿ ತಡೆಬೇಲಿ ತೆರವುಗೊಳಿಸಲಾಗುತ್ತದೆ. ಆ ಬಳಿಕ ಸಮುದ್ರಕ್ಕೆ ಇಳಿಯಬಹುದಾಗಿದೆ ಎಂದು ಪ್ರವಾಸೋದ್ಯಮ ಇಲಾಖೆ ತಿಳಿಸಿದೆ.

News Updates

ಎಸ್‌ಐಆ‌ರ್ ವಿಚಾರದಲ್ಲಿ ಬಿಜೆಪಿ ಕಾರ್ಯಕರ್ತರ ಬೆದರಿಸಿದರೆ ಸುಮ್ಮನಿರಲ್ಲ: ಪೊಲೀಸರಿಗೆ ಸಂಸದ ಕ್ಯಾ. ಚೌಟ ಎಚ್ಚರಿಕೆ – ಕಾಂಗ್ರೆಸ್ ತನ್ನ ಆರೋಪಗಳಿಗೆ ಸೂಕ್ತ ಸಾಕ್ಷ್ಯಾಧಾರಗಳನ್ನು ಒದಗಿಸಲಿ ಅಕ್ರಮವಾಗಿ ಮತ ರದ್ದು -ಮಾಡಲಾದ ವ್ಯಕ್ತಿಯನ್ನು ತಂದು ಚುನಾವಣಾಧಿಕಾರಿ ಮುಂದೆ ನಿಲ್ಲಿಸಲಿ: ಸಂಸದ ಸವಾಲು

[t4b-ticker]
error: Content is protected !!