ಉಕ್ರೇನ್ ಡ್ರೋನ್ ದಾಳಿಗೆ ರಷ್ಯಾದ 40 ವಿಮಾನ ನಾಶ: ರಷ್ಯಾ ದಾಳಿಗೆ ಉಕ್ರೇನ್​ನ 12 ಸೈನಿಕರು ಸಾವು

Picture of Savistara

Savistara

Bureau Report

ರಷ್ಯಾ, ಉಕ್ರೇನ್ ಯುದ್ಧ ಮುಂದುವರಿದಿದೆ. ಉಕ್ರೇನ್ ಡ್ರೋನ್ ದಾಳಿಗೆ ರಷ್ಯಾದ 40 ವಿಮಾನಗಳು ಧ್ವಂಸವಾಗಿವೆ. ಇನ್ನೊಂದೆಡೆ, ರಷ್ಯಾ ದಾಳಿಗೆ ಉಕ್ರೇನ್​ನ 12 ಸೈನಿಕರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

ಕೈವ್: ಕದನ ವಿರಾಮ ಕುರಿತು ಮಾತುಕತೆ ನಡೆಸಲು ಸಿದ್ಧತೆ ನಡೆಸಿರುವ ಮಧ್ಯೆಯೇ ರಷ್ಯಾ ಮಿಲಿಟರಿ ವಿಮಾನಗಳ ಮೇಲೆ ಇಂದು ಉಕ್ರೇನ್ ಭಾರೀ ಡ್ರೋನ್ ದಾಳಿ ಮಾಡಿದೆ. ತನ್ನ ಗಡಿಯಿಂದ ಸಾವಿರಾರು ಕಿಲೋಮೀಟರ್ (ಮೈಲುಗಳು) ದೂರದಲ್ಲಿರುವ ಪೂರ್ವ ಸೈಬೀರಿಯಾದಲ್ಲಿರುವ ನೆಲೆಯನ್ನು ಹೊಡೆದುರುಳಿಸಿದ್ದೇವೆ ಎಂದು ಉಕ್ರೇನಿಯನ್ ಭದ್ರತಾ ಪಡೆಗಳ ಮೂಲಗಳು ತಿಳಿಸಿವೆ.”ಉಕ್ರೇನ್ ಭದ್ರತಾ ಪಡೆಗಳು ರಷ್ಯಾದ ಬಾಂಬರ್​ಗಳನ್ನು ನಾಶಪಡಿಸುವ ಗುರಿಯ ಜೊತೆ ದೊಡ್ಡ ಪ್ರಮಾಣದ ವಿಶೇಷ ಕಾರ್ಯಾಚರಣೆಯನ್ನು ನಡೆಸುತ್ತಿವೆ. ಗುರಿಯಿಟ್ಟು ಬೆಲಾಯ್ ವಾಯುನೆಲೆಯಲ್ಲಿ 40ಕ್ಕೂ ಹೆಚ್ಚು ವಿಮಾನಗಳನ್ನು ಹೊಡೆದುರುಳಿಸಲಾಗಿದೆ. ಇದರಿಂದ ಭಾರೀ ಪ್ರಮಾಣದಲ್ಲಿ ಬೆಂಕಿ ಹೊತ್ತುಕೊಂಡಿದೆ”ಎಂದು ಮೂಲಗಳು ತಿಳಿಸಿವೆ.ಡ್ರೋನ್ ದಾಳಿ ನಡೆಸಲು ಒಂದೂವರೆ ವರ್ಷ ತೆಗೆದುಕೊಂಡಿತು ಮತ್ತು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರೇ ಇದರ ಮೇಲ್ವಿಚಾರಣೆ ಮಾಡಿದ್ದಾರೆ ಎಂದು ವರದಿಯಾಗಿದೆ. ಇನ್ನೊಂದೆಡೆ ತರಬೇತಿಯ ಸಮಯದಲ್ಲಿ ರಷ್ಯಾದ ದಾಳಿಯಲ್ಲಿ 12 ಉಕ್ರೇನಿಯನ್ ಸೈನಿಕರು ಸಾವನ್ನಪ್ಪಿದ್ದಾರೆ ಎಂದು ಕೈವ್ ತಿಳಿಸಿದೆ.

ಉಕ್ರೇನ್ ಸೇನಾ ತರಬೇತಿ ಶಿಬಿರದ ಮೇಲೆ ರಷ್ಯಾ ಕ್ಷಿಪಣಿ ದಾಳಿ ನಡೆಸಿದ ಪರಿಣಾಮ 12 ಜನ ಸೈನಿಕರು ಸಾವನ್ನಪ್ಪಿ, ಹಲವರು ಗಾಯಗೊಂಡಿದ್ದಾರೆ ಎಂದು ಕೈವ್ ಮಾಹಿತಿ ನೀಡಿದೆ.ಗಡಿಯಲ್ಲಿ ತರಬೇತಿ ಪಡೆಯುತ್ತಿದ್ದ ಆರು ಸೈನಿಕರು ಕಳೆದ ತಿಂಗಳು ರಷ್ಯಾದ ದಾಳಿಯಿಂದ ಸಾವನ್ನಪ್ಪಿದ್ದರು. ಇಂದು, ಜೂನ್ 1 ರಂದು, ಉಕ್ರೇನಿಯನ್ ಸೈನ್ಯದ ತರಬೇತಿ ಸ್ಥಳದ ಮೇಲೆ ರಷ್ಯಾ ಕ್ಷಿಪಣಿ ದಾಳಿಯನ್ನು ಪ್ರಾರಂಭಿಸಿದೆ ಎಂದು ಉಕ್ರೇನಿಯನ್ ಸೈನ್ಯವು ಹೇಳಿಕೆಯಲ್ಲಿ ತಿಳಿಸಿದೆ.

ಮಧ್ಯಾಹ್ನ 12:50ರ ವೇಳೆಗೆ 12 ಜನರು ಸಾವನ್ನಪ್ಪಿದ್ದಾರೆ ಮತ್ತು 60 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ. ಇದಕ್ಕೆ ಕಠಿಣ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಉಕ್ರೇನ್ ಸೇನೆ ತಿಳಿಸಿದೆ.ಉಕ್ರೇನ್‌ನ ಉತ್ತರ ಸುಮಿ ಪ್ರದೇಶದಲ್ಲಿ ಮತ್ತೊಂದು ಹಳ್ಳಿಯನ್ನು ವಶಪಡಿಸಿಕೊಂಡಿರುವುದಾಗಿ ಭಾನುವಾರ ರಷ್ಯಾ ಸೇನೆ ಹೇಳಿದೆ. ಇತ್ತೀಚಿನ ವಾರಗಳಲ್ಲಿ ಈ ಪ್ರದೇಶದಲ್ಲಿ ಹಲವಾರು ವಸಾಹತುಗಳನ್ನು ವಶಪಡಿಸಿಕೊಂಡಿರುವುದಾಗಿ ರಷ್ಯಾ ಹೇಳಿಕೊಂಡಿದೆ ಮತ್ತು ಗಡಿಯ ಇನ್ನೊಂದು ಬದಿಯಲ್ಲಿ 50,000ಕ್ಕೂ ಹೆಚ್ಚು ಸೈನಿಕರನ್ನು ನಿಯೋಜಿಸಿದೆ ಎಂದು ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಹೇಳಿದ್ದಾರೆ. ತೀವ್ರವಾದ ಶೆಲ್ ದಾಳಿಯ ನಡುವೆ ಈ ಪ್ರದೇಶದ ಅಧಿಕಾರಿಗಳು 200ಕ್ಕೂ ಹೆಚ್ಚು ಹಳ್ಳಿಗಳನ್ನು ಸ್ಥಳಾಂತರಿಸಿದ್ದಾರೆ.

ಮಾತುಕತೆಗಾಗಿ ಇಸ್ತಾನ್‌ಬುಲ್‌ನಲ್ಲಿ ರಷ್ಯಾ, ಉಕ್ರೇನ್ ನಿಯೋಗಗಳು:

ರಷ್ಯಾದೊಂದಿಗೆ ಮಾತುಕತೆಗಾಗಿ ತಮ್ಮ ಸಚಿವ ರುಸ್ಟೆಮ್ ಉಮೆರೊವ್ ನೇತೃತ್ವದ ನಿಯೋಗ ಸೋಮವಾರ ಇಸ್ತಾನ್‌ಬುಲ್‌ಗೆ ತೆರಳಿದೆ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಭಾನುವಾರ ಹೇಳಿದ್ದಾರೆ.

News Updates

ಎಸ್‌ಐಆ‌ರ್ ವಿಚಾರದಲ್ಲಿ ಬಿಜೆಪಿ ಕಾರ್ಯಕರ್ತರ ಬೆದರಿಸಿದರೆ ಸುಮ್ಮನಿರಲ್ಲ: ಪೊಲೀಸರಿಗೆ ಸಂಸದ ಕ್ಯಾ. ಚೌಟ ಎಚ್ಚರಿಕೆ – ಕಾಂಗ್ರೆಸ್ ತನ್ನ ಆರೋಪಗಳಿಗೆ ಸೂಕ್ತ ಸಾಕ್ಷ್ಯಾಧಾರಗಳನ್ನು ಒದಗಿಸಲಿ ಅಕ್ರಮವಾಗಿ ಮತ ರದ್ದು -ಮಾಡಲಾದ ವ್ಯಕ್ತಿಯನ್ನು ತಂದು ಚುನಾವಣಾಧಿಕಾರಿ ಮುಂದೆ ನಿಲ್ಲಿಸಲಿ: ಸಂಸದ ಸವಾಲು

[t4b-ticker]
error: Content is protected !!