ಜೂ.2ರಂದು ‘ಶ್ರೀರಾಮ’ ಫೈ ಓವರ್ ಸಾಂಕೇತಿಕ ಉದ್ಘಾಟನೆ..

Picture of Savistara

Savistara

Bureau Report

ಬಂಟ್ವಾಳ: ಜೂನ್ 2 ರಂದು ಸೋಮವಾರ ಬೆಳಿಗ್ಗೆ 10 ಗಂಟೆಗೆ ಬಹುನಿರೀಕ್ಷೆಯ ಕಲ್ಲಡ್ಕ “ಶ್ರೀರಾಮ” ಪ್ರೈ ಓವರ್ ಸಾಂಕೇತಿಕವಾಗಿ ಉದ್ಘಾಟನೆಯಾಗಲಿದೆ ಎಂದು ಕಲ್ಲಡ್ಕದ ಮೂಲಗಳು ತಿಳಿಸಿವೆ.

ಆ‌ರ್.ಎಸ್.ಎಸ್.ಪ್ರಮುಖರಾದ ಡಾ.ಕಲ್ಲಡ್ಕ ಪ್ರಭಾಕರ್ ಭಟ್ ಅವರು ರಸ್ತೆಯನ್ನು ಸಾಂಕೇತಿಕವಾಗಿ ಉದ್ಘಾಟನೆ ಮಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.ನೂತನವಾಗಿ ನಿರ್ಮಾಣವಾದ ಕಲ್ಲಡ್ಕದ ಪ್ರೈ ಓವರ್ ಗೆ ಕಲ್ಲಡ್ಕ ಶ್ರೀರಾಮ ಪ್ರೈ ಓವರ್ ಎಂದು ನಾಮಕರಣ ಮಾಡಿ ಉದ್ಘಾಟನೆ ಮಾಡಲು ಉದ್ದೇಶಿಸಲಾಗಿದ್ದು, ಇದಕ್ಕೆ ಸಕಲ ರೀತಿಯ ವ್ಯವಸ್ಥೆಗಳೊಂದಿಗೆ ನಾಳೆ ಅನಾವರಣಗೊಳಿಸಲಾಗುತ್ತದೆ ಎಂದು ಕಲ್ಲಡ್ಕದ ಮೂಲಗಳು ತಿಳಿಸಿವೆ.

ಮೇ ಅಂತ್ಯದ ವೇಳೆ ಕಲ್ಲಡ್ಕ ಪ್ರೈ ಓವರ್ ಸಂಪೂರ್ಣವಾಗಲಿದ್ದು ಸಂಚಾರಕ್ಕೆ ಮುಕ್ತವಾಗಲಿದೆ ಎಂದು ಕೆ.ಎನ್.ಆ‌ರ್.ಸಿ.ಕಂಪನಿಯವರು ತಿಳಿಸಿದ್ದರು.

ಇದೀಗ ಆರಂಭಿಕವಾಗಿ ಒಂದು ಪಾರ್ಶ್ವದಲ್ಲಿ ವಾಹನಗಳನ್ನು ಸಂಚರಿಸಲು ಬಿಡಲಾಗುವುದು. ಇದಕ್ಕಾಗಿ ಈಗಾಗಲೇ ಒಂದು ಬದಿಯಲ್ಲಿ ರಸ್ತೆಯಲ್ಲಿ ಎತ್ತರದ ಕಾಂಕ್ರೀಟ್ ಗೋಡೆಯನ್ನು ಕಟ್ಟಲಾಗಿದೆ. ನೀರು ಹರಿದುಹೋಗಲು ಪೈಪ್ ವ್ಯವಸ್ಥೆಯನ್ನು ಕಲ್ಪಿಸಲಾಗುತ್ತಿದೆ. ಕಾಮಗಾರಿ ಇನ್ನೂ ಬಾಕಿ ಇದೆ. ಬಿ.ಸಿ.ರೋಡ್ ನಿಂದ ಅಡ್ಡಹೊಳೆವರೆಗೆ 64 ಕಿ.ಮೀ. ಉದ್ದದ ಹೆದ್ದಾರಿ ಕಾಮಗಾರಿ 2017ರಲ್ಲಿ ಎಲ್. ಆಂಡ್ ಟಿ ಕಂಪನಿಗೆ 821 ಕೋಟಿ ರೂಗಳಿಗೆ ವಹಿಸಲಾಗಿತ್ತು. ಹಲವು ಕಾರಣಕ್ಕೆ ವಿಳಂಬವಾಗಿ ಬಳಿಕ ಅರ್ಧದಲ್ಲೇ ಸ್ಥಗಿತಗೊಂಡಿತು. 2021ರಲ್ಲಿ 64 ಕಿ.ಮೀ. ಉದ್ದದ ಹೆದ್ದಾರಿಯನ್ನು 49 ಕಿ.ಮೀ ಹಾಗೂ 15 ಕಿ.ಮೀ. ಎಂದು ವಿಭಾಗಿಸಿ ಕೆಎನ್ ಆರ್ ಕನ್ಸ್ ಸ್ಟ್ರಕ್ಷನ್ಸ್ ಹೈದರಾಬಾದ್ ಹಾಗು ಎಂ. ಔತಡೆ ಪ್ರೈ. ಲಿ. ಮಹಾರಾಷ್ಟ್ರ ಕಂಪನಿಗಳಿಗೆ ಗುತ್ತಿಗೆ ನೀಡಲಾಯಿತು. ಅಲ್ಲಿಂದ ಕಾಮಗಾರಿಗೆ ವೇಗ ದೊರಕಿತು.

ಪಾಣೆಮಂಗಳೂರು, ಮೆಲ್ಕಾರ್, ಮಾಣಿ, ನೆಕ್ಕಿಲಾಡಿ, ಉಪ್ಪಿನಂಗಡಿ ಜಂಕ್ಷನ್, ಉಪ್ಪಿನಂಗಡಿ ಸುಬ್ರಹ್ಮಣ್ಯ ಕ್ರಾಸ್, ನೆಲ್ಯಾಡಿ, ಪೆರಿಯಶಾಂತಿಗಳಲ್ಲಿ ಓವರ್ ಪಾಸ್ ಮೇಲ್ಸ್ತುವೆ ಹಾಗೂ ಕಲ್ಲಡ್ಕದಲ್ಲಿ ೨.೧ ಕಿ.ಮೀ. ಉದ್ದದ ಫೈಓವರ್ ನಿರ್ಮಾಣ ಕಾಮಗಾರಿ ಏಕಕಾಲದಲ್ಲಿ ಆರಂಭಗೊಂಡಿತು.ಕಲ್ಲಡ್ಕದ ಪೂರ್ಲಿಪ್ಪಾಡಿಯಿಂದ ಕೃಷ್ಣಕೋಡಿಯವರೆಗೆ ಒಟ್ಟು ೨.೧ ಕಿ.ಮೀ. ಉದ್ದರ ಈ ಮೇಲ್ವೇತುವೆಯಲ್ಲಿ ೭೦ ಪಿಲ್ಲರ್ ಗಳಿವೆ. ಒಂದರಿಂದ ಇನ್ನೊಂದಕ್ಕೆ ೩೦ ಮೀಟರ್ ಅಂತರವಿದ್ದು, ಒಟ್ಟು ೭೨ ಸ್ಪಾನ್ ಗಳ ಫೈಓವರ್ ಇದಾಗಿದೆ.

ಕಂಪೆನಿಯವರ ಮಾತಿನಂತೆ ಕಾಮಗಾರಿ ಮುಗಿಯದ ಕಾರಣ ಪ್ರೈ ಓವರ್ ನ ಒಂದು ಭಾಗದಲ್ಲಿ ವಾಹನಗಳನ್ನು ಸಂಚಾರಕ್ಕೆ ಅವಕಾಶ ನೀಡಲಾಗಿದ್ದು, ಎರಡು ವಾರಗಳ ಬಳಿಕ ಇನ್ನೊಂದು ಭಾಗದಲ್ಲಿ ಸಂಚಾರಕ್ಕೆ ಅವಕಾಶ ನೀಡಲಾಗುವುದು ಎಂದು ಕಂಪೆನಿ ಮೂಲಗಳು ತಿಳಿಸಿವೆ.

ಉಳಿದಂತೆ ನರಹರಿ ಭಾಗದಲ್ಲಿ ಕಾಮಗಾರಿಗೆ ವೇಗ ದೊರೆತಿದ್ದು, ಮಾಣಿ ಅಂಡರ್ ಪಾಸ್ ನಲ್ಲಿ ಒಂದು ಭಾಗದಲ್ಲಿ ಸಂಚಾರಕ್ಕೆ ಅವಕಾಶ ನೀಡಲಾಗಿದೆ.ಹಾಗಾಗಿ ಮಳೆಗಾಲದಲ್ಲಿ ಬಹುತೇಕ ಕಾಂಕ್ರೀಟ್ ರಸ್ತೆಯಲ್ಲಿ ಸಂಚಾರಕ್ಕೆ ಅವಕಾಶ ನೀಡಲಾಗುವ ಮೂಲಕ ವಾಹನ ಸವಾರರು ತುಸು ನಿಟ್ಟುಸಿರು ಬಿಡುವ ಹಾಗಿದೆ.

[t4b-ticker]
error: Content is protected !!