ಎನ್ ಡಿಎ ಅವಧಿಯಲ್ಲಿ ‘ನಾರಿ ಶಕ್ತಿ’ ಕೇಂದ್ರಿತ ಅಭಿವೃದ್ಧಿ ಪ್ರಧಾನಿ ಮೋದಿ

Picture of Savistara

Savistara

Bureau Report

ಜೂನ್ 9ರಂದು ಎನ್‌ಡಿಎ ಸರ್ಕಾರವು ಮೂರನೇ ಬಾರಿ ಅಧಿಕಾರದ ಚುಕ್ಕಾಣಿ ಹಿಡಿದು 1 ವರ್ಷ ಪೂರೈಸುವ ಹಿನ್ನೆಲೆಯಲ್ಲಿ ‘ಎಕ್ಸ್‌’ನಲ್ಲಿ ಪೋಸ್ಟ್ ಮಾಡಿದ್ದಾರೆ.

ವಿಜ್ಞಾನ, ತಂತ್ರಜ್ಞಾನ, ಶಿಕ್ಷಣ, ಕ್ರೀಡೆ, ಸೈನ್ಯ ಸೇರಿದಂತೆ ಎಲ್ಲಾ ವಲಯಗಳಲ್ಲೂ ಭಾರತೀಯ ಮಹಿಳೆಯರು ಅಪ್ರತಿಮ ಸಾಧನೆ ಮಾಡುತ್ತಿದ್ದಾರೆ. ಇದು ಹಲವರಿಗೆ ಮಾದರಿಯಾಗಿದೆ ಎಂದರು.

ಸ್ವಚ್ಛ ಭಾರತ, ಜನ್ ಧನ್, ಉಜ್ವಲ ಯೋಜನೆ, ಮುದ್ರಾ ಯೋಜನೆ, ಪಿ.ಎಂ. ಆವಾಸ್ ಯೋಜನೆ, ಬೇಟಿ ಬಚಾವೊ-ಬೇಟಿ ಪಡಾವೊ ಸೇರಿದಂತೆ ಎನ್‌ಡಿಎ ಸರ್ಕಾರದ ಹಲವು ಯೋಜನೆಗಳು ಮಹಿಳಾಪರ ಅಭಿವೃದ್ಧಿಯಿಂದ ಕೂಡಿವೆ ಎಂದು ತಿಳಿಸಿದರು.ಮಹಿಳೆಯರ ಅಭಿವೃದ್ಧಿಗೆ ಪೂರಕವಾಗುವ ಸರ್ಕಾರಿ ಯೋಜನೆಗಳ ಪಟ್ಟಿಯನ್ನು ಪ್ರಧಾನಿ ಮೋದಿ ಅವರು ಹಂಚಿಕೊಂಡಿದ್ದಾರೆ.

ಅದರಲ್ಲಿ ಗರ್ಭಿಣಿಯರ ಮರಣ ಪ್ರಮಾಣವು 2011-13ರಲ್ಲಿ ಲಕ್ಷಕ್ಕೆ 167 ಇದ್ದದ್ದು 2019-21ಕ್ಕೆ 93ಕ್ಕೆ ಇಳಿಕೆ ಕಂಡಿದೆ. ಪ್ರತಿ ಮನೆಗೂ ನಲ್ಲಿ ನೀರಿನ ಸೌಲಭ್ಯವು 2019ರಲ್ಲಿ 3.23ಕೋಟಿ ಮನೆಗಳಿಗೆ ಇದ್ದದ್ದು 2025ರ ಮೇ ವೇಳೆಗೆ 15.64 ಕೋಟಿಗೆ ಏರಿಕೆಯಾಗಿದೆ. ಉಜ್ವಲ ಯೋಜನೆ ಅಡಿಯಲ್ಲಿ10 ಕೋಟಿ ಮನೆಗಳಿಗೆ ಗ್ಯಾಸ್‌ ಸೌಲಭ್ಯ ಕಲ್ಪಿಸಲಾಗಿದೆ.

News Updates

ಎಸ್‌ಐಆ‌ರ್ ವಿಚಾರದಲ್ಲಿ ಬಿಜೆಪಿ ಕಾರ್ಯಕರ್ತರ ಬೆದರಿಸಿದರೆ ಸುಮ್ಮನಿರಲ್ಲ: ಪೊಲೀಸರಿಗೆ ಸಂಸದ ಕ್ಯಾ. ಚೌಟ ಎಚ್ಚರಿಕೆ – ಕಾಂಗ್ರೆಸ್ ತನ್ನ ಆರೋಪಗಳಿಗೆ ಸೂಕ್ತ ಸಾಕ್ಷ್ಯಾಧಾರಗಳನ್ನು ಒದಗಿಸಲಿ ಅಕ್ರಮವಾಗಿ ಮತ ರದ್ದು -ಮಾಡಲಾದ ವ್ಯಕ್ತಿಯನ್ನು ತಂದು ಚುನಾವಣಾಧಿಕಾರಿ ಮುಂದೆ ನಿಲ್ಲಿಸಲಿ: ಸಂಸದ ಸವಾಲು

[t4b-ticker]
error: Content is protected !!