ಇರಾನ್ ಮೇಲೆ ಇಸ್ರೇಲ್ ದಾಳಿ:ಜಗತ್ತಿನ ಎಲ್ಲಾ ರಾಯಭಾರ ಕಚೇರಿಗಳನ್ನು ಮುಚ್ಚಿದ ಇಸ್ರೇಲ್

Picture of Savistara

Savistara

Bureau Report

‘ಜಗತ್ತಿನ ವಿವಿಧ ರಾಷ್ಟ್ರಗಳಲ್ಲಿರುವ ತನ್ನ ನಾಗರಿಕರು ಜಾಗರೂಕರಾಗಿರಬೇಕು. ಯಹೂದಿ ಅಥವಾ ಇಸ್ರೇಲ್‌ನ ಯಾವುದೇ ಲಾಂಛನವನ್ನು ಸಾರ್ವಜನಿಕ ಸ್ಥಳಗಳಲ್ಲಿ ಪ್ರದರ್ಶಿಸಬಾರದು’ ಎಂದು ತನ್ನ ನಾಗರಿಕರಿಗೆ ಇಸ್ರೇಲ್ ಹೇಳಿದೆ.

‘ರಾಯಭಾರ ಕಚೇರಿಯ ಯಾವುದೇ ಸೇವೆಗಳು ಲಭ್ಯವಾಗುವುದಿಲ್ಲ. ಹೀಗಾಗಿ ಯಾವುದೇ ದಾಳಿ ಎದುರಾದರೂ ತನ್ನ ನಾಗರಿಕರು ಸ್ಥಳೀಯ ಭದ್ರತಾ ಸಿಬ್ಬಂದಿಯೊಂದಿಗೆ ಸಹಕರಿಸಿ’ ಎಂದು ತನ್ನ ಎಚ್ಚರಿಕೆಯ ಸಂದೇಶದಲ್ಲಿ ಹೇಳಿದೆ.

ರಾಯಭಾರ ಕಚೇರಿ ಎಷ್ಟು ದಿನ ಮುಚ್ಚಿರಲಿದೆ ಎಂಬ ಯಾವುದೇ ಮಾಹಿತಿಯನ್ನು ಇಸ್ರೇಲ್ ನೀಡಿಲ್ಲ. ಬರ್ಲಿನ್‌ನ ರಾಯಭಾರ ಕಚೇರಿಯ ಸಿಬ್ಬಂದಿಯೊಬ್ಬರು ಕರೆ ಸ್ವೀಕರಿಸಿದರಾದರೂ ಅವರು ಹೆಚ್ಚಿನ ಮಾಹಿತಿ ನೀಡಲಿಲ್ಲ.ಈ ಕುರಿತಂತೆ ಜರ್ಮನಿ ಚಾನ್ಸಲರ್ ಫ್ರೆಡ್ರಿಕ್ ಮರ್ಜ್‌ ಅವರು ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿ, ‘ತನ್ನ ನೆಲದಲ್ಲಿರುವ ಯಹೂದಿ ಮತ್ತು ಇಸ್ರೇಲ್‌ನ ತಾಣಗಳಿಗೆ ನೀಡುವ ಭದ್ರತೆ ಹೆಚ್ಚಿಸುವುದಾಗಿ ಭರವಸೆ ನೀಡಿದ್ದಾರೆ.

‘ಇರಾನ್‌ನ ಅಣುಶಕ್ತಿ ಕೇಂದ್ರಗಳು ಮತ್ತು ಕ್ಷಿಪಣಿ ಕಾರ್ಖಾನೆ ಮೇಲೆ ದಾಳಿ ನಡೆಸಲಾಗಿದೆ. ಸೇನಾ ಕಮಾಂಡರ್‌ನನ್ನು ಹತ್ಯೆ ಮಾಡಲಾಗಿದೆ. ಅಣು ಬಾಂಬ್ ಉತ್ಪಾದಿಸಲು ಮುಂದಾಗಿರುವ ಟೆಹರಾನ್ ಯತ್ನವನ್ನು ತಡೆಯಲು ದೀರ್ಘ ಕಾಲ ಈ ಸೇನಾ ಕಾರ್ಯಾಚರಣೆ ಮುಂದುವರಿಯಲಿದೆ’ ಎಂದು ಇಸ್ರೇಲ್ ಹೇಳಿದೆ.

‘ಅಮೆರಿಕದ ಮಾತುಕತೆಯ ಬೇಡಿಕೆಗಳನ್ನು ನಿರಾಕರಿಸುವ ಮೂಲಕ ಇರಾನ್ ದಾಳಿಯನ್ನು ತಾನೇ ಆಹ್ವಾನಿಸಿಕೊಂಡಿದೆ. ಮುಂದಿನ ದಾಳಿ ಇನ್ನೂ ಘೋರವಾಗಿರಲಿದೆ’ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಎಚ್ಚರಿಸಿದ್ದಾರೆ.

News Updates

ಎಸ್‌ಐಆ‌ರ್ ವಿಚಾರದಲ್ಲಿ ಬಿಜೆಪಿ ಕಾರ್ಯಕರ್ತರ ಬೆದರಿಸಿದರೆ ಸುಮ್ಮನಿರಲ್ಲ: ಪೊಲೀಸರಿಗೆ ಸಂಸದ ಕ್ಯಾ. ಚೌಟ ಎಚ್ಚರಿಕೆ – ಕಾಂಗ್ರೆಸ್ ತನ್ನ ಆರೋಪಗಳಿಗೆ ಸೂಕ್ತ ಸಾಕ್ಷ್ಯಾಧಾರಗಳನ್ನು ಒದಗಿಸಲಿ ಅಕ್ರಮವಾಗಿ ಮತ ರದ್ದು -ಮಾಡಲಾದ ವ್ಯಕ್ತಿಯನ್ನು ತಂದು ಚುನಾವಣಾಧಿಕಾರಿ ಮುಂದೆ ನಿಲ್ಲಿಸಲಿ: ಸಂಸದ ಸವಾಲು

[t4b-ticker]
error: Content is protected !!