BSNL 5 G ಸೇವೆ ಇಂದಿನಿಂದ ಲಾಂಚ್

Picture of Savistara

Savistara

Bureau Report

ಹೈದರಾಬಾದ್‌ನಲ್ಲಿ ಕ್ರಾಂತಿಕಾರಿ ಬಿಎಸ್‌ಎನ್ಎಲ್ ಕ್ವಾಂಟಮ್ 5G ಎಫ್‌ಡಬ್ಲ್ಯೂಎ ಸೇವೆಯನ್ನು ಪ್ರಾರಂಭಿಸಲಾಗಿದೆ. ಇದು ಈಗ ಆಯ್ದ ನಗರಗಳಲ್ಲಿ ಲಭ್ಯವಿದೆ. ಬಿಎಸ್‌ಎನ್‌ಎಲ್ ಕ್ಯೂ-5G ಎಫ್‌ಡಬ್ಲ್ಯೂಎಯೊಂದಿಗೆ ಅತ್ಯಾಕರ್ಷಕ ವೇಗದ ಇಂಟರ್ನೆಟ್ ಅನ್ನು ಆನಂದಿಸಿ ಎಂದು ಬಿಎಸ್‌ಎನ್‌ಎಲ್ ಪೋಸ್ಟ್‌ನಲ್ಲಿ ಬರೆದಿದೆ.

ಕ್ವಾಂಟಮ್ 5G ಸೇವೆಯ ಮೂಲಕ, BSNL ಬಳಕೆದಾರರು ಹೈ-ಸ್ಪೀಡ್ ಇಂಟರ್ನೆಟ್ ಅನ್ನು ಆನಂದಿಸಲಿದ್ದಾರೆ, ಇದು ಸ್ಟ್ರೀಮಿಂಗ್, ಗೇಮಿಂಗ್, ವೀಡಿಯೊ ಕರೆಗಳು ಮತ್ತು ವರ್ಕ್ ಪ್ರಮ್ ಹೋಂನಂಥಹ ಕಾರ್ಯಗಳಿಗೆ ಪ್ರಯೋಜನಕಾರಿಯಾಗಿದೆ.

1 ಲಕ್ಷ ಹೊಸ ಮೊಬೈಲ್ ಟವರ್‌ಗಳಿಗೆ ಸಿದ್ಧತೆ : ತನ್ನ ನೆಟ್‌ವರ್ಕ್ ವ್ಯಾಪ್ತಿಯನ್ನು ಸುಧಾರಿಸಲು, ಬಿಎಸ್‌ಎನ್‌ಎಲ್ ಮುಂಬರುವ ದಿನಗಳಲ್ಲಿ 1 ಲಕ್ಷ ಹೊಸ 4G ಮತ್ತು 5G ಮೊಬೈಲ್ ಟವರ್‌ಗಳನ್ನು ಸ್ಥಾಪಿಸುವ ಯೋಜನೆಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಇದಕ್ಕಾಗಿ ಕೇಂದ್ರ ಸಚಿವ ಸಂಪುಟದ ಅನುಮೋದನೆಗಾಗಿ ಕಾಯುತ್ತಿದೆ.

ಕಳೆದ ವರ್ಷವೂ ಬಿಎಸ್‌ಎನ್‌ಎಲ್ ಇಷ್ಟೇ ಸಂಖ್ಯೆಯ ಟವರ್‌ಗಳನ್ನು ಸ್ಥಾಪಿಸುವುದಾಗಿ ಭರವಸೆ ನೀಡಿತ್ತು. ಇಲ್ಲಿಯವರೆಗೆ 70,000ಕ್ಕೂ ಹೆಚ್ಚು ಟವರ್‌ಗಳನ್ನು ಸಕ್ರಿಯಗೊಳಿಸಲಾಗಿದೆ. ಈ ಟವರ್‌ಗಳು ಸಂಪೂರ್ಣವಾಗಿ ಸಕ್ರಿಯಗೊಂಡ ನಂತರ, ದೇಶಾದ್ಯಂತ ಬಿಎಸ್‌ಎನ್‌ಎಲ್‌ನ ಸಂಪರ್ಕವು ಮಹತ್ತರವಾಗಿ ಸುಧಾರಿಸುತ್ತದೆ.ಈ ದೊಡ್ಡ ಯೋಜನೆಯನ್ನು ಬೆಂಬಲಿಸಲು, ಕಂಪನಿಯು 13,000 ಕೋಟಿ ಹೂಡಿಕೆ ಮಾಡಿದೆ. ಇದನ್ನು ಮುಂದಿನ 10 ವರ್ಷಗಳ ಕಾಲ ಈ ಟವರ್‌ಗಳ ನಿರ್ವಹಣೆ ಮತ್ತು ಕಾರ್ಯಾಚರಣೆಗೆ ಖರ್ಚು ಮಾಡಲಾಗುವುದು. ಮೇ 2023 ರಲ್ಲಿ, ಬಿಎಸ್ಎನ್‌ಎಲ್‌ ಎರಿಕ್ಸನ್‌ಗೆ ಟೆಲಿಕಾಂ ಉಪಕರಣಗಳನ್ನು ಸ್ಥಾಪಿಸುವ ಒಪ್ಪಂದವನ್ನು ನೀಡಿತು. ಆದರೆ ಟಾಟಾ ಕನ್ಸಲ್ವೆನ್ಸಿ ಸರ್ವೀಸಸ್‌ ಮತ್ತು ತೇಜಸ್‌ ನೆಟ್‌ವರ್ಕ್‌ಗೆ ಟವ‌ರ್ ಸ್ಥಾಪನೆಯ ಜವಾಬ್ದಾರಿಯನ್ನು ವಹಿಸಲಾಯಿತು.

ಈ ಸಂಪೂರ್ಣ ಪ್ರಕ್ರಿಯೆಯಡಿಯಲ್ಲಿ ಇಲ್ಲಿಯವರೆಗೆ ಒಟ್ಟು 1 ಲಕ್ಷ 4G/5G ಟವರ್‌ಗಳನ್ನು ಸ್ಥಾಪಿಸಲಾಗಿದೆ. ಅವುಗಳಲ್ಲಿ 70,000 ಕ್ಕೂ ಹೆಚ್ಚು ಟವರ್‌ಗಳು ಈಗಾಗಲೇ ಕಾರ್ಯನಿರ್ವಹಿಸುತ್ತಿದ್ದು ಸೇವೆಯನ್ನು ಒದಗಿಸುತ್ತಿವೆ.

[t4b-ticker]
error: Content is protected !!