ವಿಮಾನ ದುರಂತ:ಏರ್ ಇಂಡಿಯಾ ವಿಮಾನ ಸಂಚಾರದಲ್ಲಿ 20% ಬುಕ್ಕಿಂಗ್ ಇಳಿಕೆ

Picture of Savistara

Savistara

Bureau Report

ಹೊಸದಿಲ್ಲಿ: ಅಹ್ಮದಾಬಾದ್ ವಿಮಾನ ದುರಂತದ ಬಳಿಕ

ಏ‌ರ್ ಇಂಡಿಯಾ ಸಂಸ್ಥೆಯ ವಿಮಾನಗಳಲ್ಲಿ ಪ್ರಯಾಣಿಕರ ಬುಕಿಂಗ್ ಸರಾಸರಿ ಶೇ.20ರಷ್ಟು ಇಳಿಕೆಯಾಗಿದೆ. ಜತೆಗೆ ಏರ್‌ಇಂಡಿಯಾ ಟಿಕೆಟ್ ದರವೂ ಸರಾಸರಿ ಶೇ.8-15ರಷ್ಟು ಇಳಿಕೆಯಾಗಿದೆ.

ಭಾರತೀಯ ಪ್ರವಾಸ ನಿರ್ವಾಹ ಕರ ಸಂಘಟನೆಯ ಅಧ್ಯಕ್ಷ ರವಿ ಗೊಸೈನ್ ಅವರು ಈ ವಿಷಯ ತಿಳಿಸಿದ್ದಾರೆ. ದುರಂತವು ಜನರಲ್ಲಿ ಭಯ ಸೃಷ್ಟಿಸಿದ್ದು, ಪ್ರಯಾಣಿಕರ ಸಂಖ್ಯೆ ಏಕಾಏಕಿ ಇಳಿಮುಖವಾಗಿದೆ. ಅದರಲ್ಲೂ ಅಂತಾರಾಷ್ಟ್ರೀಯ ವಿಮಾನಗಳ ಬುಕಿಂಗ್‌ನಲ್ಲಿ ಶೇ.18-ರಿಂದ ಶೇ.22ರಷ್ಟು, ದೇಸಿ ವಿಮಾನಗಳಲ್ಲಿ ಶೇ.10ರಿಂದ 8.12ರಷ್ಟು ಪ್ರಮಾಣದಲ್ಲಿ ಇಳಿಕೆಯಾಗಿದೆ ಎಂದಿದ್ದಾರೆ.
8 ವಿಮಾನಗಳ ಸಂಚಾರ ರದ್ದು ದುರಂತದ ಬಳಿಕ ಏ‌ರ್ ಇಂಡಿಯಾ ಸಂಸ್ಥೆಯ ವಿಮಾನಗಳ ಸಮಸ್ಯೆ ಹೆಚ್ಚುತ್ತಿದ್ದು, ನಿರ್ವಹಣೆ, ಕಾರ್ಯಾಚರಣೆಗೆ ಸಂಬಂಧಿಸಿದ ಸಮಸ್ಯೆಗಳಿಂದಾಗಿ ಸಂಸ್ಥೆ ಶುಕ್ರವಾರ 4 ಅಂತಾರಾಷ್ಟ್ರೀಯ ವಿಮಾನ ಸೇರಿ 8 ವಿಮಾನಗಳನ್ನು ರದ್ದುಗೊಳಿಸಿದೆ. ಪ್ರಯಾಣಿಕರಿಗೆ ಪರ್ಯಾಯ ವ್ಯವಸ್ಥೆ ಇಲ್ಲವೇ ಹಣ ಮರುಪಾವತಿ ಮಾಡುವುದಾಗಿಯೂ
ರದ್ದುಗೊಳಿಸಿದೆ.ಅಲ್ಲದೇ ಜೂ.21ರಿಂದ ಜು.15ರವರೆಗೆ ವಾರಕ್ಕೆ 38 ಅಂತಾರಾಷ್ಟ್ರೀಯ ವಿಮಾನ ಹಾಗೂ 3 ಸಾಗರ ಮಾರ್ಗಗಳನ್ನು ರದ್ದು ಮಾಡುವುದಾಗಿ ಸಂಸ್ಥೆ ತಿಳಿಸಿದೆ.

News Updates

ಎಸ್‌ಐಆ‌ರ್ ವಿಚಾರದಲ್ಲಿ ಬಿಜೆಪಿ ಕಾರ್ಯಕರ್ತರ ಬೆದರಿಸಿದರೆ ಸುಮ್ಮನಿರಲ್ಲ: ಪೊಲೀಸರಿಗೆ ಸಂಸದ ಕ್ಯಾ. ಚೌಟ ಎಚ್ಚರಿಕೆ – ಕಾಂಗ್ರೆಸ್ ತನ್ನ ಆರೋಪಗಳಿಗೆ ಸೂಕ್ತ ಸಾಕ್ಷ್ಯಾಧಾರಗಳನ್ನು ಒದಗಿಸಲಿ ಅಕ್ರಮವಾಗಿ ಮತ ರದ್ದು -ಮಾಡಲಾದ ವ್ಯಕ್ತಿಯನ್ನು ತಂದು ಚುನಾವಣಾಧಿಕಾರಿ ಮುಂದೆ ನಿಲ್ಲಿಸಲಿ: ಸಂಸದ ಸವಾಲು

[t4b-ticker]
error: Content is protected !!