ಸುಳ್ಯ : ನಿವೇದಿತಾ ಮಹಿಳಾ ಜಾಗೃತಿ ಸೇವಾ ಟ್ರಸ್ಟ್ ವತಿಯಿಂದ ನಿವೇದಿತಾ ಜಯಂತಿ ಹಾಗೂ ದೇಶಭಕ್ತಿಗೀತೆ ಗಾಯನ ಸ್ಪರ್ಧೆ

Picture of Savistara

Savistara

Bureau Report

ನಿವೇದಿತಾ ಮಹಿಳಾ ಜಾಗೃತಿ ಸೇವಾ ಟ್ರಸ್ಟ್(ರಿ.) ಇದರ ವತಿಯಿಂದ ನಿವೇದಿತಾ ಜಯಂತಿ ಮತ್ತು ದೇಶಭಕ್ತಿ ಗೀತೆ ಗಾಯನ ಸ್ಪರ್ಧೆ ಈ ದಿನ ನಡೆಯಿತು.ಸಭೆಯ ಅಧ್ಯಕ್ಷತೆಯನ್ನು ಟ್ರಸ್ಟ್ ಅಧ್ಯಕ್ಷರಾದ ಪುಷ್ಟಮೇದಪ್ಪ ವಹಿಸಿದ್ದರು.ಮುಖ್ಯ ಅತಿಥಿಗಳಾಗಿ ನಿವೃತ್ತ ಶಿಕ್ಷಕಿಯರಾದ ಶ್ರೀಮತಿ ದಮಯಂತಿ ಅಡ್ಕಬಳೆ, ಶ್ರೀಮತಿ ಲಕ್ಷ್ಮಿ ಬಿ.ಎಸ್ ಮಾವಂಜಿ, ಶ್ರೀಮತಿ ಶ್ಯಾಮಲ ಬೊಳ್ಳಾಜೆ, ಶ್ರೀಮತಿ ತೀರ್ಥಕುಮಾರಿ ನೆಲ್ಲೂರು ಕೆಟ್ರಾಜೆ ದೀಪ ಬೆಳಗಿಸಿ ಭಾರತಮಾತೆ ಮತ್ತು ನಿವೇದಿತಾ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಸಾಮೂಹಿಕ ವಂದೇ ಮಾತರಂ ಗೀತೆ ಹಾಡಿ ಕಾರ್ಯಕ್ರಮ ಉದ್ಘಾಟಿಸಿದರು. ನಂತರ ದೇಶಭಕ್ತಿಗೀತೆ ಗಾಯನ ಸ್ಪರ್ಧೆ ನಡೆಯಿತು. ವಿಜೇತರಿಗೆ ಪುಸ್ತಕ ನೀಡಿ ಗೌರವಿಸಲಾಯಿತು. ಸತ್ಯವತಿ ಅಡ್ಡನ ಪಾರೆ ಮತ್ತು ಲಕ್ಷ್ಮಿ.ವಿ ಶೆಟ್ಟಿ ಸ್ಪರ್ಧೆಗಳ ನಿರ್ಣಾಯಕರಾಗಿದ್ದರು.ಲೋಲಾಕ್ಷಿ ದಾಸನಕಜೆ ಕಾರ್ಯಕ್ರಮ ನಿರೂಪಿಸಿದರು.ಸುಜಾತ ರೈ ಸ್ವಾಗತಿಸಿ ವೀಣಾ ಮೋಂಟಡ್ಕ ಧನ್ಯವಾದ ಸಮರ್ಪಿಸಿದರು.ಶಾಂತಿಮಂತ್ರ ದೊಂದಿಗೆ ಕಾರ್ಯಕ್ರಮ ಮುಕ್ತಾಯಗೊಳಿಸಲಾಯಿತು.

News Updates

ಕೇಂದ್ರ ಸರ್ಕಾರದಿಂದ ಶಿವಮೊಗ್ಗ ನಗರ ಬೈಪಾಸ್ ಹಾಗೂ ನಗರ ವ್ಯಾಪ್ತಿಯ ಹೆದ್ದಾರಿ ಅಭಿವೃದ್ಧಿಗೆ 466.74 ಕೋಟಿ ರೂ. ಮಂಜೂರು; ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ ಕೃತಜ್ಞತೆ ಸಲ್ಲಿಸಿದ ಸಂಸದ ಬಿ.ವೈ. ರಾಘವೇಂದ್ರ

[t4b-ticker]
error: Content is protected !!