ಇಶಾನ್ ಕಿಶನ್, ತಿಲಕ್ ವರ್ಮಾ ಸ್ಪೋಟಕ ಬ್ಯಾಟಿಂಗ್: ಟಿ20 ವಿಶ್ವಕಪ್ ಅಭ್ಯಾಸ ಪಂದ್ಯದಲ್ಲಿ ಭಾರತಕ್ಕೆ ಜಯ

Picture of Savistara

Savistara

Bureau Report

ನವಿ ಮುಂಬೈ: ಅಮೋಘ ಲಯದಲ್ಲಿರುವ ಇಶಾನ್ ಕಿಶನ್ ಅವರ ಸ್ಪೋಟಕ ಅರ್ಧಶತಕದ ಬಲದಿಂದ ಭಾರತ ತಂಡವು ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಅಭ್ಯಾಸ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು 30 ರನ್‌ಗಳಿಂದ ಮಣಿಸಿತು. ಡಿ.ವೈ.ಪಾಟೀಲ ಕ್ರೀಡಾಂಗಣಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ತಂಡದ ನಾಯಕ

ಸೂರ್ಯಕುಮಾ‌ರ್ ಯಾದವ್ ಅವರು ಬ್ಯಾಟಿಂಗ್ ಆಯ್ದುಕೊಂಡರು. ಆರಂಭಿಕ ಆಟಗಾರರಾದ ಇಶಾನ್ (53; 20໖, 4×2, 6×7) ಹಾಗೂ ಅಭಿಷೇಕ್ ಶರ್ಮ (24; 12A 4×3, 6×1) 5.4 ಓವರ್ ಗಳಲ್ಲಿ 80 ರನ್ ಬಾರಿಸಿದರು . ತಿಲಕ್ ವರ್ಮಾ 19 ಎಸೆತಗಳಲ್ಲಿ ತಲಾ 3 ಬೌಂಡರಿ ಹಾಗೂ ಸಿಕ್ಸರ್‌ಗಳಿದ್ದ 45 ರನ್ ಸಿಡಿಸಿದರು. ಕೊನೆಯಲ್ಲಿ ಹಾರ್ದಿಕ್ ಪಾಂಡ್ಯ ಕೇವಲ 10 ಎಸೆತಗಳಲ್ಲಿ 30 ರನ್ ಬಾರಿಸಿದರು. ಅವರ ಬ್ಯಾಟ್‌ನಿಂದ 2 ಬೌಂಡರಿ ಹಾಗೂ 3 ಸಿಕ್ಸರ್‌ಗಳು ಬಂದವು. ಭಾರತ ತಂಡ 20 ಓವರ್‌ಗಳಲ್ಲಿ 5 ವಿಕೆಟ್‌ಗೆ 240 ರನ್ ಗಳಿಸಿತು.

ಕಠಿಣ ಗುರಿ ಬೆನ್ನಟ್ಟಿದ ಏಡನ್ ಮರ್ಕರಂ ಪಡೆಯು 7 ವಿಕೆಟ್‌ಗೆ 210 ರನ್ ಗಳಿಸಿ ಓವರ್ ಪೂರೈಸಿತು. ರೈಯಾನ್ ರಿಕಲ್ಟನ್ (44; 21ಎ, 4×4, 6×3) ಹಾಗೂ ಟ್ರಸ್ಟನ್ ಸ್ಟಬ್ (ಔಟಾಗದೇ 45; 212, 4×1, 6×4) .ಸಂಕ್ಷಿಪ್ತ ಸ್ಕೋರುಭಾರತ: 20 ಓವರ್‌ಗಳಲ್ಲಿ 5 ವಿಕೆಟ್‌ಗೆ 240 (ಇಶಾನ್ ಕಿಶನ್ 53, ತಿಲಕ್ ವರ್ಮಾ 45; ಮಾರ್ಕೊ ಯಾನ್ಸೆನ್ 18ಕ್ಕೆ1) ದಕ್ಷಿಣ ಆಫ್ರಿಕಾ: 20 ಓವರ್‌ಗಳಲ್ಲಿ 7 ವಿಕೆಟ್‌ಗೆ 210 (ರೈಯಾನ್ ರಿಕಲ್ಡನ್ 44, ಟ್ರಸ್ಟನ್ ಸ್ಟಬ್ ಔಟಾಗದೇ 45; ಅಭಿಷೇಕ್ ಶರ್ಮಾ 322).

News Updates

ಎಸ್‌ಐಆ‌ರ್ ವಿಚಾರದಲ್ಲಿ ಬಿಜೆಪಿ ಕಾರ್ಯಕರ್ತರ ಬೆದರಿಸಿದರೆ ಸುಮ್ಮನಿರಲ್ಲ: ಪೊಲೀಸರಿಗೆ ಸಂಸದ ಕ್ಯಾ. ಚೌಟ ಎಚ್ಚರಿಕೆ – ಕಾಂಗ್ರೆಸ್ ತನ್ನ ಆರೋಪಗಳಿಗೆ ಸೂಕ್ತ ಸಾಕ್ಷ್ಯಾಧಾರಗಳನ್ನು ಒದಗಿಸಲಿ ಅಕ್ರಮವಾಗಿ ಮತ ರದ್ದು -ಮಾಡಲಾದ ವ್ಯಕ್ತಿಯನ್ನು ತಂದು ಚುನಾವಣಾಧಿಕಾರಿ ಮುಂದೆ ನಿಲ್ಲಿಸಲಿ: ಸಂಸದ ಸವಾಲು

[t4b-ticker]
error: Content is protected !!