ಕತ್ತಲಲ್ಲಿ ಹೆಣಗಿದ ಬಾಣಂತಿಯರು; ಮೊಬೈಲ್‌ ಬೆಳಕಿನಲ್ಲಿ ಕಾಲ ಕಳೆದ ಮಕ್ಕಳು!

Picture of Savistara

Savistara

Bureau Report

ತೆಕ್ಕಲಕೋಟೆ: ಇಲ್ಲಿನ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರದಬಾಣಂತಿ ಮತ್ತು ಮಕ್ಕಳ ವಾರ್ಡ್‌ನಲ್ಲಿ ವಿದ್ಯುತ್‌ ಇಲ್ಲದೆ ಎರಡು ರಾತ್ರಿ ಮೊಬೈಲ್ ಫೋನ್ ಬೆಳಕಿನಲ್ಲಿ ಬಾಣಂತಿಯರು ಮತ್ತು ಮಕ್ಕಳು ಇರಬೇಕಾಯಿತು. ಅದರ ವಿಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.

‘ಲೋಡ್‌ಶೆಡ್ಡಿಂಗ್‌ ನೆಪದಲ್ಲಿ ಹಗಲಿನಲ್ಲಿ ಅಲ್ಲದೆ ರಾತ್ರಿ ವೇಳೆಯಲ್ಲೂ ವಿದ್ಯುತ್ಕಡಿತಗೊಳಿಸಲಾಯಿತು. ಸಂಪೂರ್ಣ ವಾಗಿ ಕತ್ತಲು ಆವರಿಸಿದ್ದರಿಂದ ಮೊಬೈಲ್‌ಫೋನ್ ಬೆಳಕಿನಲ್ಲೇ ಇರಬೇಕಾಯಿತು. ಸೊಳ್ಳೆಗಳಿಂದ ಕಚ್ಚಿಸಿಕೊಂಡು, ಸೆಖೆಯಲ್ಲೇ ರಾತ್ರಿಯಿಡೀ ಕಳೆಯ ಬೇಕಾಯಿತು’ ಎಂದು ಬಾಣಂತಿಯರು ಮತ್ತು ಸಂಬಂಧಿಕರು ದೂರಿದರು.’ಬುಧವಾರ ವಿದ್ಯುತ್‌ ಪೂರೈಕೆ ಸ್ಥಗಿತಗೊಂಡು, ಗುರುವಾರ ಮತ್ತು ಶುಕ್ರವಾರವೂ ಮುಂದುವರಿಯಿತು. ಆಸ್ಪತ್ರೆಯ ಹೊರಾಂಗಣ, ಚೀಟಿ ಬರೆಯುವ ಕೋಣೆ ಮತ್ತು ವೈದ್ಯರ ಕೋಣೆಯಲ್ಲಿ ಮಾತ್ರ ಜನರೇಟ‌ರ್ ವ್ಯವಸ್ಥೆಯಿದೆ. ಆದರೆ, ಬಾಣಂತಿಯರ ವಾರ್ಡ್‌ಗೆ ತುರ್ತು ವ್ಯವಸ್ಥೆ ಇರಲಿಲ್ಲ’ ಎಂದರು.’ಬಾಣಂತಿಯರ ವಾರ್ಡ್‌ಗೆ ಪ್ರತ್ಯೇಕ ವಾಗಿ ಯುಪಿಎಸ್ ವ್ಯವಸ್ಥೆ ಕಲ್ಪಿಸಲಾಗಿದೆ. ಆದರೆ, ಯುಪಿಎಸ್‌ಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ಬಟನ್‌ ಬಂದ್‌ ಆಗಿತ್ತು. ಹೀಗಾಗಿ ಸಮಸ್ಯೆ ತಲೆದೋರಿತು. ಈಗ ಸಮಸ್ಯೆ ಪರಿಹರಿಸಿ, ವಿದ್ಯುತ್ ಪೂರೈಕೆಗೆ ವ್ಯವಸ್ಥೆ ಮಾಡಲಾಗಿದೆ’ ಎಂದು ವೈದ್ಯಾಧಿಕಾರಿ ಹಾಗೂ ಆಡಳಿತಾಧಿಕಾರಿ ಡಾ. ರಾಮಕೃಷ್ಣ ತಿಳಿಸಿದರು.ವಿಷಯ ತಿಳಿದು ಶುಕ್ರವಾರ ಆಸ್ಪತ್ರೆಗೆ ಭೇಟಿ ನೀಡಿದ ಸಿರುಗುಪ್ಪ ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಬಸವರಾಜ ದಮ್ಮೂರು ಅವರು ಅಲ್ಲಿನ ಪರಿಸ್ಥಿತಿ ಪರಿಶೀಲಿಸಿದರು. ತಕ್ಷಣ ಸ್ಪಂದಿಸಿ ಯಾಕೆ ಸಮಸ್ಯೆ ಬಗೆಹರಿಸಲಿಲ್ಲ ಎಂದು ಆಸ್ಪತ್ರೆ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು.

News Updates

ಎಸ್‌ಐಆ‌ರ್ ವಿಚಾರದಲ್ಲಿ ಬಿಜೆಪಿ ಕಾರ್ಯಕರ್ತರ ಬೆದರಿಸಿದರೆ ಸುಮ್ಮನಿರಲ್ಲ: ಪೊಲೀಸರಿಗೆ ಸಂಸದ ಕ್ಯಾ. ಚೌಟ ಎಚ್ಚರಿಕೆ – ಕಾಂಗ್ರೆಸ್ ತನ್ನ ಆರೋಪಗಳಿಗೆ ಸೂಕ್ತ ಸಾಕ್ಷ್ಯಾಧಾರಗಳನ್ನು ಒದಗಿಸಲಿ ಅಕ್ರಮವಾಗಿ ಮತ ರದ್ದು -ಮಾಡಲಾದ ವ್ಯಕ್ತಿಯನ್ನು ತಂದು ಚುನಾವಣಾಧಿಕಾರಿ ಮುಂದೆ ನಿಲ್ಲಿಸಲಿ: ಸಂಸದ ಸವಾಲು

[t4b-ticker]
error: Content is protected !!