ಸುಳ್ಯ ಬಿಜೆಪಿ ಮಂಡಲದಿಂದ ‘ವಿಶ್ವ ನಾಯಕ ನರೇಂದ್ರ ಮೋದಿ’ ಬೀದಿ ನಾಟಕ: ಅಕ್ಟೋಬರ್ 12 ರಿಂದ ತಾಲೂಕಿನಾದ್ಯಂತ ಪ್ರದರ್ಶನ

Picture of Savistara

Savistara

Bureau Report

ಸುಳ್ಯ: ಭಾರತೀಯ ಜನತಾ ಪಾರ್ಟಿ ಸುಳ್ಯ ಮಂಡಲದ ವತಿಯಿಂದ ನಮ್ಮ ನಾಯಕರಾದ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ‘ವಿಕಸಿತ ಭಾರತದ ಸೇವಾ ಸಂಕಲ್ಪ ಅಭಿಯಾನದ ಅಂಗವಾಗಿ ಅಕ್ಟೋಬರ್ 12 ರಿಂದ ಸುಳ್ಯ ತಾಲೂಕಿನಾದ್ಯಂತ ಬೀದಿ ನಾಟಕ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ.

ನಾಟಕದ ಹೆಸರು: “ವಿಶ್ವ ನಾಯಕ ನರೇಂದ್ರ ಮೋದಿ” ಈ ಬೀದಿ ನಾಟಕದ ರಚನೆಯನ್ನು ಕುಸುಮಾಧರ ಎ.ಟಿ. ಅವರು ಮಾಡಿದ್ದು, ನಿರ್ದೇಶನವನ್ನು ಕುಸುಮಾಧರ ಎ.ಟಿ. ಮತ್ತು ರಾಜ್ ಮುಖೇಶ್ ಸುಳ್ಯ ಅವರು ನಿರ್ವಹಿಸಲಿದ್ದಾರೆ.

ಹಾಡುಗಳ ಸಂಯೋಜನೆಯನ್ನು ರಾಜ್ ಮುಖೇಶ್ ಅವರು ಮಾಡಿದ್ದಾರೆ. ನಾಟಕದಲ್ಲಿ ಕುಸುಮಾಧರ ಎ.ಟಿ., ರಾಜ್ ಮುಖೇಶ್ ಸುಳ್ಯ, ಪುಷ್ಪರಾಜ್, ನಾರಾಯಣ ಎಸ್.ಎಂ., ಕೇಶವ ಮಾಸ್ಟರ್, ಚಿದಾನಂದ ವಿದ್ಯಾನಗರ, ಚಿನ್ಮಯಿ,ದುಷ್ಯಂತ್ ಕೆ ಸೇರಿದಂತೆ ಹಲವು ಕಲಾವಿದರು ಅಭಿನಯಿಸಲಿದ್ದಾರೆ.ಮೋದಿ ಅವರ ನಾಯಕತ್ವ, ವಿಕಸಿತ ಭಾರತದ ಕನಸು ಮತ್ತು ಸೇವಾ ಕಾರ್ಯಗಳನ್ನು ಜನಸಾಮಾನ್ಯರಿಗೆ ತಲುಪಿಸುವ ಉದ್ದೇಶದಿಂದ ಈ ಬೀದಿ ನಾಟಕವನ್ನು ಆಯೋಜಿಸಲಾಗಿದೆ ಎಂದು ಸುಳ್ಯ ಮಂಡಲದ ಪ್ರಕಟಣೆ ತಿಳಿಸಿದೆ.

News Updates

ಎಸ್‌ಐಆ‌ರ್ ವಿಚಾರದಲ್ಲಿ ಬಿಜೆಪಿ ಕಾರ್ಯಕರ್ತರ ಬೆದರಿಸಿದರೆ ಸುಮ್ಮನಿರಲ್ಲ: ಪೊಲೀಸರಿಗೆ ಸಂಸದ ಕ್ಯಾ. ಚೌಟ ಎಚ್ಚರಿಕೆ – ಕಾಂಗ್ರೆಸ್ ತನ್ನ ಆರೋಪಗಳಿಗೆ ಸೂಕ್ತ ಸಾಕ್ಷ್ಯಾಧಾರಗಳನ್ನು ಒದಗಿಸಲಿ ಅಕ್ರಮವಾಗಿ ಮತ ರದ್ದು -ಮಾಡಲಾದ ವ್ಯಕ್ತಿಯನ್ನು ತಂದು ಚುನಾವಣಾಧಿಕಾರಿ ಮುಂದೆ ನಿಲ್ಲಿಸಲಿ: ಸಂಸದ ಸವಾಲು

[t4b-ticker]
error: Content is protected !!