ಇಂದು ಸೂಪರ್ ಮೂನ್ ದರ್ಶನ

Picture of Savistara

Savistara

Bureau Report

ಉಡುಪಿ: ಹಾಲಿ ವರ್ಷದ ‘ಸೂಪರ್ ಮೂನ್’ ಗಳ ಸರದಿ ಅ.7ರಂದು ಆರಂಭಗೊಳ್ಳಲಿದ್ದು, ವರ್ಷಾಂತ್ಯದೊಳಗೆ ಮೂರು ಬಾರಿಚಿತ್ರ: ಗುರು ಭಾಂಡಗೆನೇಕಾಣಿಸಿಕೊಳ್ಳಲಿದೆ ಎಂದು ಭೌತಶಾಸ್ತ್ರಜ್ಞ ಡಾ.ಎ.ಪಿ.ಭಟ್ ಮಾಹಿತಿ ನೀಡಿದ್ದಾರೆ. ಅ.7ರ ಹುಣ್ಣಿಮೆ, ನ.5 ಹಾಗೂ ಡಿ.4ರ ಹುಣ್ಣಿಮೆಯು ‘ಸೂಪರ್ ಮೂನ್’ ಆಗಿ ಗೋಚರಿಸಲಿದೆ. ಈ ದಿನದಲ್ಲಿ ಚಂದ್ರನನ್ನು ನೋಡುವುದೇ ಸಡಗರ ಎಂದು ತಿಳಿಸಿದ್ದಾರೆ. ಭೂಮಿ ಹಾಗೂ ಚಂದ್ರನ * ಸರಾಸರಿ ದೂರ 3.84 ಲಕ್ಷ ಕಿ.ಮೀ. ಇದೆ. ಈ ಮೂರು ದಿನಗಳಲ್ಲಿ ಚಂದ್ರ ಸುಮಾರು 3.61 ಲಕ್ಷ ಕಿ.ಮೀ. ದೂರದಲ್ಲಿ ಗೋಚರಿಸಲಿದ್ದಾನೆ.ಅಂದರೆ ಸುಮಾರು 23 ಸಾವಿರ ಕಿ.ಮೀ. ಸಮೀಪದಲ್ಲಿ ಚಂದ್ರ ಕಾಣಿಸುತ್ತಾನೆ. ಹೀಗಾಗಿ ಪ್ರತಿ ಹುಣ್ಣಿಮೆಯಂದು ಗೋಚರಿಸುತ್ತಿದ್ದ ಚಂದ್ರ ಈ ಮೂರು ದಿನಗಳಲ್ಲಿ ಇನ್ನೂ ದೊಡ್ಡದಾಗಿ ಕಾಣಿಸಲಿದ್ದಾನೆ. ಹೀಗಾಗಿ ಬೆಳದಿಂಗಳೂ ಹೆಚ್ಚು ಪ್ರಭೆಯಿಂದ ಕೂಡಿರಲಿದೆ ಎಂದು ತಿಳಿಸಿದ್ದಾರೆ.

ಹ್ಯಾಲೋ ಗೋಚರ ಸಾಧ್ಯತೆ: ಶರತ್ಕಾಲದ ಆಶ್ವಯುಜ ಮಾಸದ ರಾತ್ರಿಯಲ್ಲಿ ಆಕಾಶ ಭವ್ಯವಾಗಿ ಗೋಚರಿಸುತ್ತದೆ. ತಿಳಿಯಾದ ಬಿಳಿ ಬಣ್ಣದ ಮೋಡಗಳ ಮಧ್ಯೆ ಬೆಳದಿಂಗಳ ಚಂದ್ರ ಇನ್ನೂ ಸುಂದರವಾಗಿ ಕಾಣಲಿದ್ದಾನೆ. ಸೂಪ‌ರ್ ಮೂನ್‌ನ ಬೆಳದಿಂಗಳ ನಡುವೆ ಅಲ್ಲಲ್ಲಿ ತೇಲುವ ಮಂಜುಗಡ್ಡೆಗಳ ಬಿಳಿ-ಹಳದಿ ವರ್ತುಲದ ‘ಹ್ಯಾಲೋ’ ಸಹ ಗೋಚರಿಸಬಹುದು ಎಂದು ಡಾ.ಎ.ಪಿ.ಭಟ್ ತಿಳಿಸಿದ್ದಾರೆ.

News Updates

ಮಂಗಳೂರು : ಬೈಕಂಪಾಡಿ, ಕೂಳೂರು ಜಂಕ್ಷನ್ ಬಳಿ ಅಂಡರ್ ಪಾಸ್ ನಿರ್ಮಾಣಕ್ಕೆ ಕೇಂದ್ರ ಸರ್ಕಾರದಿಂದ ₹11.63 ಕೋ ರೂ. ಅಧಿಕ ಅನುದಾನ ಮಂಜೂರು | ದಕ್ಷಿಣ ಕನ್ನಡ ಜಿಲ್ಲೆಯ ಹೆದ್ದಾರಿಗಳ ಸುರಕ್ಷತೆ ಮತ್ತು ಸುಗಮ ಸಂಚಾರಕ್ಕೆ ನಮ್ಮ ಸರ್ಕಾರ ಬದ್ಧವಾಗಿದೆ : ಸಂಸದ ಕ್ಯಾ.ಬ್ರಿಜೇಶ್ ಚೌಟ

[t4b-ticker]
error: Content is protected !!