ಸುಳ್ಯ :ಕನಕಮಜಲು BLA-2 ಕಾರ್ಯಕರ್ತರಿಗೆ ಬೆದರಿಕೆ ಹಾಗೂ ಕಿರುಕುಳ ನೀಡಿದ ಆರೋಪ – ಸುಳ್ಯ ಪೊಲೀಸ್ ಠಾಣೆಗೆ ಬಿಜೆಪಿ ದೂರು

Picture of Savistara

Savistara

Bureau Report

ಕನಕಮಜಲು : ಬಿಎಲ್‌-2 ಗಳಿಗೆ ಅನಾವಶ್ಯಕ ಕಿರುಕುಳದ ಕುರಿತು ಬಿಜೆಪಿ ಮುಖಂಡರು ಸುಳ್ಯ ಪೋಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ ಎಂದು ತಿಳಿದುಬಂದಿದೆ.ಬಿಜೆಪಿ ಮಂಡಲ ಸಮಿತಿ ಮಾಜಿ ಅಧ್ಯಕ್ಷ ಹರೀಶ್ ಕಂಜಿಪಿಲಿ ನೀಡಿದ ದೂರಿನಲ್ಲಿ ಅನಾವಶ್ಯಕ ದೂರವಾಣಿ ಕರೆ ಹಾಗೂ ನಿರಂತರ ಮಾನಸಿಕ ಕಿರುಕುಳದ ಮೂಲಕ ನಮ್ಮ ಬಿಎಲ್‌ಎ-2 ಗಳ ಹಕ್ಕು ಮತ್ತು ಕರ್ತವ್ಯಕ್ಕೆ ಅಡ್ಡಿ ಪಡಿಸುತ್ತಿರುವ ಕುರಿತು ಉಲ್ಲೇಖಿಸಿದ್ದಾರೆ. ರಾಜ್ಯದಲ್ಲಿ ನಡೆಯುತ್ತಿರುವ ಎಸ್‌.ಐ.ಆ‌ರ್. ಪ್ರಕ್ರಿಯೆಯ ಕರಡು ಮತದಾರ ಪಟ್ಟಿಯು ಆಗಸ್ಟ್ 23 ರಂದು ಬಿಡುಗಡೆಯಾಗಿದ್ದು, ಸದ್ರಿ ಕರಡು ಮತದಾರರ ಪಟ್ಟಿಯಲ್ಲಿ ಅನೇಕ ವ್ಯತ್ಯಾಸಗಳಿದ್ದು, ಹಲವರ ವಿಳಾಸದಲ್ಲಿ ಮತ್ತು ಮನೆ ನಂಬರ್‌ನಲ್ಲಿ ಬದಲಾವಣೆ, ಸದ್ರಿ ಮತಗಟ್ಟೆ ವ್ಯಾಪ್ತಿಯಲ್ಲಿ ವಾಸ್ತವ್ಯವಿಲ್ಲದಿರುವ ಮತದಾರರ ಹೆಸರು ಸೇರ್ಪಡೆ, ಮದುವೆಯಾಗಿ ಬೇರೆ ಊರಿಗೆ ಹೋಗಿ ಅನೇಕ ವರ್ಷಗಳಾಗಿರುವ ಮತದಾರರ ಹೆಸರುಗಳು ಅದೇ ಭಾಗ ಸಂಖ್ಯೆಯಲ್ಲಿ ಸೇರ್ಪಡೆ, ಊರಿನಿಂದ ಆಸ್ತಿ ಮಾರಿ ಬೇರೆಡೆ ವಾಸ್ತವ್ಯ ಇರುವ ಮತದಾರರ ಹೆಸರನ್ನು ವಾಸಸ್ಥಳಕ್ಕೆ ಸ್ಥಳಾಂತರ ಮಾಡದಿರುವುದು ಸೇರಿದಂತೆ ಇತ್ಯಾದಿ ಸಮಸ್ಯೆಗಳು ಕಂಡುಬಂದಿದ್ದು, ಈ ಕುರಿತು ಈ ಹಿಂದೆಯೇ ಚುನಾವಣಾ ಆಯೋಗವು ಕರೆದ ರಾಜಕೀಯ ಪಕ್ಷಗಳ ಸಭೆಯಲ್ಲಿ ಪ್ರಸ್ತಾಪಿಸಿರುತ್ತೇವೆ.

ಈ ಕುರಿತಂತೆ ನಮ್ಮ ಸಲಹೆಯಂತೆ ನಮ್ಮ ಪಾರ್ಟಿಯ ಬಿಎಲ್‌ಎ-2 ಗಳು ಚುನಾವಣಾ ಆಯೋಗವು ನೀಡಿರುವ ಹಕ್ಕುಗಳನ್ವಯ ಸದ್ರಿ ವ್ಯತ್ಯಾಸಗಳ ಕುರಿತು, ಹಾಗೂ ಸದ್ರಿ ಮತಗಟ್ಟೆಯಲ್ಲಿ ವಾಸ್ತವ್ಯ ಇಲ್ಲದಿರುವ ಮತದಾರರ ಕುರಿತು ಪರಿಶೀಲಿಸಿ ನಿಯಮಾನುಸಾರ ಸೂಕ್ತ ಕ್ರಮ ಕೈಗೊಳ್ಳುವಂತೆ ಮತಗಟ್ಟೆ ಅಧಿಕಾರಿ ಅಥವಾ ಕ್ಷೇತ್ರದ ಮತದಾನ ನೋಂದಣಾಧಿಕಾರಿಗಳಿಗೆ ನಿಗದಿತ ಆಕ್ಷೇಪಣಾ ದಿನಾಂಕದೊಳಗೆ ಲಿಖಿತ ದೂರನ್ನು ಸಲ್ಲಿಸಿರುತ್ತಾರೆ.ಸದ್ರಿ ಲಿಖಿತ ದೂರನ್ನು ಸಲ್ಲಿಸಿದ ಬಳಿಕ ಕೆಲವು ಮತಗಟ್ಟೆ ನೋಂದಣಾಧಿಕಾರಿಗಳು ನಮ್ಮ ಬಿ.ಎಲ್.ಎ.-2 ಗಳು ನೀಡಿದ ದೂರಿನ ಪ್ರತಿಯನ್ನು ಸದ್ರಿ ಆಕ್ಷೇಪಿತ ಮತದಾರರು ಯಾ ಸಂಬಂಧಿಕರಿಗೆ ನೀಡಿದ್ದು, ಆ ಮೂಲಕ ಕೆಲವು ರಾಜಕೀಯ ಮುಖಂಡರು ಹಾಗೂ ಆಕ್ಷೇಪಿತ ಮತದಾರರ ಹೆಸರಿನಲ್ಲಿ ನಮ್ಮ ಬಿ.ಎಲ್.ಎ.-2 ಗಳಿಗೆ ದೂರವಾಣಿ ಮೂಲಕ ಬೆದರಿಕೆ ಒಡ್ಡಿರುತ್ತಾರೆ. ಕನಕಮಜಲು ಗ್ರಾಮಕ್ಕೆ ಸಂಬಂಧಿಸಿದಂತೆ ಕೆಲವರು ನಿರಂತರ ದೂರವಾಣಿ ಕರೆ ಮೂಲಕ ಮಾನಸಿಕ ಕಿರಿಕಿರಿ ಉಂಟುಮಾಡುತ್ತಿದ್ದಾರೆ.

ಕಳೆದ ಎರಡು ದಿನಗಳಿಂದ ನಿರಂತರ ಬೆದರಿಕೆ ಸ್ವರೂಪದ ಕರೆಗಳು ಬಂದಿರುವ ಕಾರಣದಿಂದ ಬಿಎಲ್‌-2 ಗಳು ಮತ್ತು ಅವರ ಮನೆಯವರು ಮಾನಸಿಕವಾಗಿ ನೊಂದಿರುತ್ತಾರೆ. ಇದರಿಂದ ಕನಕಮಜಲು ಗ್ರಾಮದ ಭಾಗ ಸಂಖ್ಯೆ 194 ರ ನಮ್ಮ ಬಿಎಲ್‌ಎ-2 ರವರು ತಾವು ನೀಡಿರುವ ಆಕ್ಷೇಪಣೆ ಅರ್ಜಿಯನ್ನು ಹಿಂಪಡೆಯುವುದಾಗಿ ವಿಧಾನಸಭಾ ಕ್ಷೇತ್ರದ ಚುನಾವಣಾ ಶಾಖೆಗೆ ಲಿಖಿತ ಪತ್ರ ನೀಡಿರುತ್ತಾರೆ.ಈ ರೀತಿ ಬೆದರಿಕೆ ಹಾಗೂ ನಿರಂತರ ಫೋನ್ ಕರೆ ಮೂಲಕ ಮಾನಸಿಕ ಕಿರುಕುಳ ನೀಡಿ ಬಿಎಲ್‌ಎ-2 ಗಳ ಕರ್ತವ್ಯಕ್ಕೆ ಅಡ್ಡಿಪಡಿಸುವುದು ಚುನಾವಣಾ ಆಯೋಗದ ನೀತಿ ನಿಯಮಗಳಿಗೆ ವಿರುದ್ಧವಾಗಿದೆ.

ಯಾವುದೇ ಅರ್ಹ ಮತದಾರರ ಹೆಸರನ್ನು ಪಟ್ಟಿಯಿಂದ ತೆಗೆದುಹಾಕುವ ಹಕ್ಕು ಬಿಎಲ್‌ಎ-2 ಗಳಿಗೆ ಇಲ್ಲದಿದ್ದು, ಕೇವಲ ಪರಿಶೀಲನೆ ಮಾಡಿ ಸೂಕ್ತ ಕ್ರಮ ಕೈಗೊಳ್ಳಲು ಮಾತ್ರ ಅರ್ಜಿ ಸಲ್ಲಿಸಿದ್ದು ಅಂತಿಮ ನಿರ್ದಾರ ಮತದಾರ ನೋಂದಣಾಧಿಕಾರಿಗಳದ್ದೇ ಆಗಿರುತ್ತದೆ. ಆದರೆ ಕೆಲವು ರಾಜಕೀಯ ನಾಯಕರು ಸಾಮಾಜಿಕ ಜಾಲತಾಣದಲ್ಲಿ ತಪ್ಪು ಅಭಿಪ್ರಾಯದ ಮೂಲಕ ನಮ್ಮ ಬಿಎಲ್‌ಎ-2 ಗಳ ತೇಜೋವಧೆ ಮಾಡುತ್ತಿದ್ದಾರೆ.ಹಾಗಾಗಿ ತಾವುಗಳು ನಮ್ಮ ಬಿಎಲ್‌ಎ-2 ಗಳ ಮೂಲಕ ನೀಡಿರುವ ಆಕ್ಷೇಪಣೆಗಳನ್ನು ಯಾವುದೇ ಕಾರಣಕ್ಕೂ ತಳ್ಳಿಹಾಕದೇ ಸದ್ರಿ ಆಕ್ಷೇಪಿತ ಮತದಾರರ ಸೂಕ್ತ ಪರಿಶೀಲನೆ ನಡೆಸಿ ನಿಯಮಾನುಸಾರ ಕ್ರಮ ಕೈಗೊಳ್ಳಬೇಕೆಂದು ಅವರು ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ವೆಂಕಟ್ ವಳಲಂಬೆ, ಮಾಜಿ ಅಧ್ಯಕ್ಷ ಹರೀಶ್ ಕಂಜಿಪಿಲಿ, ಮಂಡಲ ಸಮಿತಿ ಪ್ರ.ಕಾರ್ಯದರ್ಶಿಗಳಾದ ಸುಭೋದ್ ಶೆಟ್ಟಿ ಮೇನಾಳ, ವಿನಯಕುಮಾರ ಕಂದಡ್ಕ ಹಾಗೂ ಸುದರ್ಶನ ಪಾತಿಕಲ್ಲು, ಹೇಮಂತ್ ಮಠ, ಚಂದ್ರಶೇಖರ ಕನಕಮಜಲು, ಚಂದ್ರಶೇಖರ ನೆಡಿಲು ಸೇರಿದಂತೆ ಪಡೆದರು.

News Updates

ಎಸ್‌ಐಆ‌ರ್ ವಿಚಾರದಲ್ಲಿ ಬಿಜೆಪಿ ಕಾರ್ಯಕರ್ತರ ಬೆದರಿಸಿದರೆ ಸುಮ್ಮನಿರಲ್ಲ: ಪೊಲೀಸರಿಗೆ ಸಂಸದ ಕ್ಯಾ. ಚೌಟ ಎಚ್ಚರಿಕೆ – ಕಾಂಗ್ರೆಸ್ ತನ್ನ ಆರೋಪಗಳಿಗೆ ಸೂಕ್ತ ಸಾಕ್ಷ್ಯಾಧಾರಗಳನ್ನು ಒದಗಿಸಲಿ ಅಕ್ರಮವಾಗಿ ಮತ ರದ್ದು -ಮಾಡಲಾದ ವ್ಯಕ್ತಿಯನ್ನು ತಂದು ಚುನಾವಣಾಧಿಕಾರಿ ಮುಂದೆ ನಿಲ್ಲಿಸಲಿ: ಸಂಸದ ಸವಾಲು

[t4b-ticker]
error: Content is protected !!