ಬರಗಾಲದ ನಡುವೆ ಸಚಿವರ ಕಾರು ಖರೀದಿ ಮಿತಿ 31 ಲಕ್ಷಕ್ಕೆ ಏರಿಕೆ: ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾದ ಸರ್ಕಾರ

Picture of Savistara

Savistara

Bureau Report

ರಾಜ್ಯದಲ್ಲಿ ಮುಂಗಾರು ಕೈಕೊಟ್ಟು ಅನ್ನದಾತರು ತೀವ್ರ ಸಂಕಷ್ಟಕ್ಕೆ ಸಿಲುಕಿರುವ ಹಾಗೂ ಆರ್ಥಿಕ ಪರಿಸ್ಥಿತಿ ಬಿಗಡಾಯಿಸಿರುವ ಈ ಸಂದರ್ಭದಲ್ಲೇ, ರಾಜ್ಯಸರ್ಕಾರವು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗುವಂತಹ ತೀರ್ಮಾನವೊಂದನ್ನು ಕೈಗೊಂಡಿದೆ.ಬಡ ರೈತರ ಕಣ್ಣೀರು ಒರೆಸುವ ಬದಲು, ಸಚಿವರ ಐಷಾರಾಮಿ ಓಡಾಟಕ್ಕಾಗಿ ಹೊಸ ವಾಹನ ಖರೀದಿಸುವ ಗರಿಷ್ಠ ಹಣಕಾಸು ಮಿತಿಯನ್ನು ಸರ್ಕಾರ ದಿಢೀ‌ರ್ ಆಗಿ ಏರಿಕೆ ಮಾಡಿ ಆದೇಶ ಹೊರಡಿಸಿದೆ.

ಬರದ ಬೇಗೆಯಲ್ಲಿ ಬೇಯುತ್ತಿರುವ ಅನ್ನದಾತ

ರಾಜ್ಯದಲ್ಲಿ ಭೀಕರ ಬರಗಾಲ ಆವರಿಸಿದ್ದು, ಮಳೆಯನ್ನೇ ನಂಬಿ ಬಿತ್ತನೆ ಮಾಡಿದ್ದ ಕೃಷಿಕರ ಬದುಕು ಸಂಪೂರ್ಣವಾಗಿ ಬೀದಿಗೆ ಬಿದ್ದಿದೆ. ಈ ಭೀಕರ ಪರಿಸ್ಥಿತಿಯನ್ನು ಮನಗಂಡು ಇಡೀ ರಾಜ್ಯದ ಬರೋಬ್ಬರಿ 217 ತಾಲೂಕುಗಳನ್ನು ಈಗಾಗಲೇ ಬರಪೀಡಿತ ಪ್ರದೇಶಗಳೆಂದು ಘೋಷಣೆ ಮಾಡಲಾಗಿದೆ. ಬೆಳೆ ಕಳೆದುಕೊಂಡು ಕಂಗಾಲಾಗಿರುವ ರೈತರಿಗೆ ಸರ್ಕಾರ ಕೇವಲ 2,500 ರೂ.ನಷ್ಟು ತಾತ್ಕಾಲಿಕ ಪರಿಹಾರ ನೀಡಿ ಕೈತೊಳೆದುಕೊಂಡಿದೆ. ಹಣಕಾಸು ಇಲಾಖೆಯು ಸಹ ಹೊಸ ಯೋಜನೆಗಳನ್ನು ಘೋಷಿಸುವ ಮುನ್ನ ವಾಸ್ತವ ಆರ್ಥಿಕ ಸ್ಥಿತಿಯನ್ನು ನೆನಪಿನಲ್ಲಿಡಿ ಎಂದು ಎಚ್ಚರಿಸಿದ್ದರೂ ಸರ್ಕಾರ ಈ ಆದೇಶ ಹೊರಡಿಸಿದೆ.

26 ಲಕ್ಷದಿಂದ 31 ಲಕ್ಷಕ್ಕೆ ಏರಿಕೆಯಾದ ಕಾರಿನ ಬಜೆಟ್

ಒಂದೆಡೆ ಕೃಷಿ ಕಾರ್ಮಿಕರು ಮತ್ತು ರೈತರು ಇಂದಿನ ಬದುಕನ್ನು ಸಾಗಿಸುವುದೇ ಹೇಗೆ ಎಂಬ ಚಿಂತೆಯಲ್ಲಿದ್ದರೆ, ಇತ್ತ ಸಚಿವರು, ಲೋಕಸಭಾ ಹಾಗೂ ರಾಜ್ಯಸಭಾ ಸದಸ್ಯರ ಐಷಾರಾಮಿ ಸವಾರಿಗಾಗಿ ಹೊಸ ಕಾರುಗಳ ಖರೀದಿಯ ಬಜೆಟ್ ಅನ್ನು ಹೆಚ್ಚಿಸಲಾಗಿದೆ. ಈ ಹಿಂದೆ ಸಚಿವರ ಹೊಸ ಕಾರು ಖರೀದಿಗೆ ಇದ್ದ ಗರಿಷ್ಠ ಮಿತಿಯಾದ 26 ಲಕ್ಷ ರೂಪಾಯಿಗಳನ್ನು ಈಗ ಬರೋಬ್ಬರಿ 31 ಲಕ್ಷ ರೂಪಾಯಿಗಳಿಗೆ ಹೆಚ್ಚಿಸಿ ಸರ್ಕಾರ ಅಧಿಕೃತವಾಗಿ ಒಪ್ಪಿಗೆ ಸೂಚಿಸಿದೆ.

ರೈತರ ಗೋಳು ಕೇಳಲು ಹಣವಿಲ್ಲ ಎನ್ನುವ ಸರ್ಕಾರ, ಸಚಿವರ ಹೊಸ ಕಾರುಗಳ ಸೌಕರ್ಯಕ್ಕೆ ಲಕ್ಷಾಂತರ ರೂಪಾಯಿಗಳ ಸಾರ್ವಜನಿಕರ ತೆರಿಗೆ ಹಣವನ್ನು ಪೋಲು ಮಾಡುತ್ತಿರುವುದು ಸಾರ್ವಜನಿಕ ವಲಯದಲ್ಲಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

News Updates

ಎಸ್‌ಐಆ‌ರ್ ವಿಚಾರದಲ್ಲಿ ಬಿಜೆಪಿ ಕಾರ್ಯಕರ್ತರ ಬೆದರಿಸಿದರೆ ಸುಮ್ಮನಿರಲ್ಲ: ಪೊಲೀಸರಿಗೆ ಸಂಸದ ಕ್ಯಾ. ಚೌಟ ಎಚ್ಚರಿಕೆ – ಕಾಂಗ್ರೆಸ್ ತನ್ನ ಆರೋಪಗಳಿಗೆ ಸೂಕ್ತ ಸಾಕ್ಷ್ಯಾಧಾರಗಳನ್ನು ಒದಗಿಸಲಿ ಅಕ್ರಮವಾಗಿ ಮತ ರದ್ದು -ಮಾಡಲಾದ ವ್ಯಕ್ತಿಯನ್ನು ತಂದು ಚುನಾವಣಾಧಿಕಾರಿ ಮುಂದೆ ನಿಲ್ಲಿಸಲಿ: ಸಂಸದ ಸವಾಲು

[t4b-ticker]
error: Content is protected !!