ಮಂಗಳೂರು (ಕರ್ನಾಟಕ ವೇವ್ಸ್): ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ನಿರ್ದೇಶಕರು 35 ಜಿಲ್ಲಾ ಪಂಚಾಯತ್ ಕ್ಷೇತ್ರಗಳ ಅಧಿಕೃತ ಮೀಸಲಾತಿ ಪಟ್ಟಿಯನ್ನು ಪ್ರಕಟಿಸಿದ್ದಾರೆ.
ವಲಯವಾರು ಮೀಸಲಾತಿ ವಿಶ್ಲೇಷಣೆ:
ಸಾಮಾನ್ಯ ವರ್ಗ – 18 ಕ್ಷೇತ್ರ
– ಸಾಮಾನ್ಯ: 9 ಕ್ಷೇತ್ರ (ಅಡ್ಯಾರ್, ಕೊಣಾಜೆ, ಗೋಳ್ತಮಜಲು, ಪುದು, ನಾರಾವಿ, ಉಜಿರೆ, ಉಪ್ಪಿನಂಗಡಿ, ಕುಟ್ರುಪಾಡಿ, ಜಾಲ್ಸೂರು)
– ಸಾಮಾನ್ಯ ಮಹಿಳೆ: 9 ಕ್ಷೇತ್ರ (ಬೆಳುವಾಯಿ, 62ನೇ ತೊಕ್ಕೂರು, ತೆಂಕ ಎಡಪದವು, ಮುನ್ನೂರು, ಮಾಣಿ, ಲಾಯಿಲ, ನೆಟ್ಟಣಿಗೆ ಮುಡ್ನೂರು, ಕೊಯಿಲ, ಬೆಳ್ಳಾರೆ)
ಹಿಂದುಳಿದ ವರ್ಗ ಎ – 10 ಕ್ಷೇತ್ರ
– ಹಿಂದುಳಿದ ಎ: 5 ಕ್ಷೇತ್ರ (ಹಳೆಯಂಗಡಿ, ಪುತ್ತಿಗೆ, ಸಂಗಬೆಟ್ಟು, ಅರ್ಯಾಪು, ಗುತ್ತಿಗಾರು)
– ಹಿಂದುಳಿದ ಎ ಮಹಿಳೆ: 5 ಕ್ಷೇತ್ರ (ಮೂಡುಶೆಡ್ಡೆ, ಮಂಜನಾಡಿ, ಸಜಿಪಮುನ್ನೂರು, ಕುವೆಟ್ಟು, ಸುಬ್ರಹ್ಮಣ್ಯ)
ಹಿಂದುಳಿದ ವರ್ಗ ಬಿ – 2 ಕ್ಷೇತ್ರ
– ಕೊಳ್ನಾಡು – ಹಿಂದುಳಿದ ಬಿ
– ಕಣಿಯೂರು – ಹಿಂದುಳಿದ ಬಿ ಮಹಿಳೆ
ಅನುಸೂಚಿತ ಜಾತಿ – 3 ಕ್ಷೇತ್ರ
– ಸರಪಾಡಿ – ಅನುಸೂಚಿತ ಜಾತಿ
– ಧರ್ಮಸ್ಥಳ – ಅನುಸೂಚಿತ ಜಾತಿ ಮಹಿಳೆ
– ನರಿ ಮೊಗರು – ಅನುಸೂಚಿತ ಜಾತಿ ಮಹಿಳೆ
ಅನುಸೂಚಿತ ಪಂಗಡ – 2 ಕ್ಷೇತ್ರ
– ಪುಣಚ – ಅನುಸೂಚಿತ ಪಂಗಡ ಮಹಿಳೆ
– ಅಳದಂಗಡಿ – ಅನುಸೂಚಿತ ಪಂಗಡ
ಪುತ್ತೂರು – ಸುಳ್ಯ ತಾಲೂಕಿನ ಫೋಕಸ್:
ಪುತ್ತೂರು ಮತ್ತು ಸುಳ್ಯ ವ್ಯಾಪ್ತಿಯ ಕ್ಷೇತ್ರಗಳಲ್ಲಿ ಈ ಬಾರಿ ಮಹಿಳೆಯರಿಗೆ ಹೆಚ್ಚಿನ ಆದ್ಯತೆ ಸಿಕ್ಕಿದೆ.-
ಬೆಳ್ಳಾರೆ (33) – ಸಾಮಾನ್ಯ ಮಹಿಳೆ:
ಹಾಲಿ ಪ್ರಬಲ ಕ್ಷೇತ್ರ, ಮಹಿಳಾ ಅಭ್ಯರ್ಥಿಗಳಿಗೆ ಅವಕಾಶ-
ಜಾಲ್ಸೂರು (34) – ಸಾಮಾನ್ಯ:
ಓಪನ್ ಫೈಟ್, ಎಲ್ಲಾ ವರ್ಗದ ಪುರುಷ ಅಭ್ಯರ್ಥಿಗಳಿಗೆ ಅವಕಾಶ-
ಗುತ್ತಿಗಾರು (35) – ಹಿಂದುಳಿದ ಎ:
ಹಿಂದುಳಿದ ವರ್ಗ ಎ ಸಮುದಾಯಕ್ಕೆ ಮೀಸಲು-
ಕುಟ್ರುಪಾಡಿ (32) – ಸಾಮಾನ್ಯ
– ಸುಬ್ರಹ್ಮಣ್ಯ (31) – ಹಿಂದುಳಿದ ಎ ಮಹಿಳೆ
ಮುಂದಿನ ಪ್ರಕ್ರಿಯೆ:
ಮೀಸಲಾತಿ ಪಟ್ಟಿ ಪ್ರಕಟವಾದ ಬೆನ್ನಲ್ಲೇ ರಾಜಕೀಯ ಪಕ್ಷಗಳಲ್ಲಿ ಟಿಕೆಟ್ ಆಕಾಂಕ್ಷಿಗಳ ಲಾಬಿ ತೀವ್ರಗೊಂಡಿದೆ. ಆಕ್ಷೇಪಣೆ ಸಲ್ಲಿಕೆಗೆ ಅವಕಾಶ ನೀಡಿದ ಬಳಿಕ ಅಂತಿಮ ಪಟ್ಟಿ ಪ್ರಕಟವಾಗಲಿದೆ.












































